Tuesday, April 27, 2010

ಮಹಾಭಾರತವೆಂಬ ಯುದ್ದವು?ಕುರುಕ್ಷೇತ್ರವೆಂಬ ಕೃತಿಯು ?...

        ಪ್ರಕಾರ ಈ ರೀತಿಯ  ಪುಸ್ತಕ ಓದುತ್ತಿರುವುದು ಇದೆ ಮೊದಲು. ಅಲ್ಲದೆ ಕನ್ನಡ ದಲ್ಲಿ ಇಂತಹ ಆಯೋಗದ ಪುಸ್ತಕಗಳು ತುಂಬಾ ಕಡಿಮೆ. ನಿಜಕ್ಕೂ ಅಮೂಲ್ಯವಾದ ಕೃತಿ. 'ಧರ್ಮ  ಎಂದರೇನು? ', ' ನ್ಯಾಯ-ಅನ್ಯಾಯ ಗಳ ಪರಾಮರ್ಶೆ ', 'ಧರ್ಮ ಕ್ಷೇತ್ರೇ ಕುರುಕ್ಷೇತ್ರೆ ಹೇಗೆ' ಎನ್ನುವ ವಿಚಾರವನ್ನು ಬಯಲಿಗೆಳೆಯುತ್ತದೆ . ಈ ಪುಸ್ತಕ ಓದಿದಾಗ  ಮಹಾಭಾರತದ ಜಿಜ್ಞಾಸೆ ಆರಂಭ ವಾಗುತ್ತದೆ ,                                           
ಇಲ್ಲಿ ಬರುವ ಧರ್ಮ ದೇವತೆಯ ಮುಂದೆ ಯುದ್ದ ಅಪರಾಧಿಗಳು ತಪ್ಪೋಪ್ಪಿಕೊಳ್ಳುವಂತೆ ,ಯುದ್ದದ ಪ್ರತ್ಯಕ್ಷದರ್ಶಿ  ಸಂಜಯ, ಕೌರವರ ಹಿರಿಯ ದುರ್ಯೋಧನ , ಮೇಧಾವಿ ಭೀಷ್ಮ ,ಬಿಲ್ಲೋಜ ದ್ರೋಣ ,ದಾನಶೂರ ಕರ್ಣ ,ಆತನ ಸಾರಥಿ ಶಲ್ಯ , ಕೌರವರ ಮಾವ ಶಕುನಿ,ಗುರುಪುತ್ರ ...ಅಲ್ಲ ಬ್ರಾಹ್ಮಣ  ದ್ರೋಣರ ಮಗ ಅಶ್ವತ್ತಾಮ, ಪಾಂಡವರ ಸೇನಾಪತಿ ದೃಷ್ಟದ್ಯುಮ್ನ,ದ್ರೋಣರ ವೈರೀ ,ಬಾಲ್ಯಕಾಲ ಸ್ನೇಹಿತ ದ್ರುಪದ  , ಪಾಂಡವರ ಹಿರಿಯ ಧರ್ಮರಾಯ, ಪಾಂಚಾಲಿ ದ್ರುಪದಿ ಪಾಂಡವರ ತಾಯಿ ಕುಂತಿ , ವೇದವ್ಯಾಸರ ಮಗ ವಿದುರ,ಮುನಿ ಶೌನುಕ (ಕೃಷ್ಣ ನ ಪಾತ್ರದ ಬಗ್ಗೆ ಹೇಳುವವರು ) ಇವರೆಲ್ಲರೂ ತಮ್ಮ ತಮ್ಮ ತಪ್ಪು ಗಳನ್ನೂ ವಿವರಿಸುತ್ತಾರೆ , ಹಾಗೆ ತಪ್ಪುಗಳಿಗೆ ಸಮಾಧಾನ ನೀಡುತ್ತಾರೆ
             ಈ ಕೃತಿ  ಓದಿದಾಗ  ಇಡಿ ಕುರುಕ್ಷೇತ್ರ ಯುದ್ದದಲ್ಲಿ ಹಲವಾರು ಮೋಸಗಳು ನಡೆದಿವೆ ಎಂದರೆ ತಪ್ಪಾಗಲಾರದು. ಇಲ್ಲಿ ಬರುವ ಭೀಷ್ಮ, ಶಲ್ಯ , ಕರ್ಣ , ದ್ರೋಣ  ಎಲ್ಲರೂ ಉಭಯ ಸಂಕಟಿಗಳೇ," ಭೀಷ್ಮ ಇದ್ದು ಕೌರವರಿಗೆ ಸಹಾಯ ಮಾಡಿ, ಸತ್ತು ಪಾಂಡವರಿಗೆ ನೆರವಾಗುತ್ತಾನೆ".ಅಲ್ಲದೆ ತನ್ನನ್ನು ಸಾಯಿಸುವ ಉಪಾಯವನ್ನು ಆತನೇ ಶತ್ರು ಗಳಿಗೆ ನೀಡುತ್ತಾನೆ. ಇದು ಕ್ಷತ್ರಿಯಧರ್ಮಕ್ಕೆ ವಿರುದ್ಧ.ಚಕ್ರವ್ಯೂಹದಲ್ಲಿ  ಅಭಿಮನ್ಯುವನ್ನು ಮೋಸದಿಂದ ದ್ರೋಣ ,ಕರ್ಣನ ಮೂಲಕ ಆತನ ಕೈ ಕತ್ತರಿಸುವಂತೆ ಮಾಡಿದ್ದೂ," ಅಶ್ವತ್ತಾಮ ಹಥ: ಕಂಜರೆ:" ಎಂದು  ಧರ್ಮರಾಯ ಹೇಳುವ ಸಂಧರ್ಭ ದಲ್ಲಿ ಕೊನೆಯ ಶಬ್ದ ಹೇಳುವಾಗ ಶ್ರೀ ಕೃಷ್ಣ ಶಂಖ  ಊದಿ ಅದನ್ನು ಕೇಳಿಸದಂತೆ ಮಾಡಿದ್ದು,ಅದನ್ನು ಕೇಳಿ ದ್ರೋಣ ತನ್ನ ಮಗ ಸತ್ತಿದ್ದಾನೆ ಎಂದು ಭ್ರಮಿಸಿ ಅಲ್ಲೇ ಕುಸಿದು ಕುಳಿತಾಗ ದ್ರೋಣರನ್ನು ಸಾಯಿಸಲೆಂದೇ ಹುಟ್ಟಿದ್ದ ದ್ರುಷ್ಟದ್ಯುಮ್ನು ಅವರನ್ನು ಸಾಯಿಸುವುದು, ಕರ್ಣನ ರಥ ಹುದುಗಿದಾಗ ಮೋಸದಿಂದ ಆತನನ್ನು ಸಾಯಿಸುವುದು, ಶಲ್ಯನ ಮೋಸ, ಇದಕ್ಕೆಲ್ಲ ಸಮಾಧಾನದ ಹೇಳಿಕೆ ಸಿಗುತ್ತದೆ. ಅಶ್ವತ್ತಾಮ ಪಾಂಡವರ ಶಿಬಿರದಲ್ಲಿ ಮಾಡುವ ಕೊಲೆ ಹಾಗು ಭ್ರೂಣ ಹತ್ಯೆಯು ಪ್ರತ್ಯಕ್ಷ ಅಪರಾಧವಾಗಿ ಕಾಣುತ್ತದೆ . ವಾರನಾವತಾದ್ ಪ್ರಕರಣ ,ದ್ರೌಪದಿ ವಸ್ತ್ರಾಪಹರಣ ,ಇವೆಲ್ಲ ಧರ್ಮದೇವತೆಯ ಮುಂದೆ ಸಾಂಧರ್ಭಿಕ ಅಪರಾಧವಾಗಿ ಕಾಣುತ್ತದೆ . ಅದಕ್ಕೆ ಸರಿಯಾದ ಶಿಕ್ಸೆಯು ಅವ್ರಿಗೆ ಲಭಿಸುತ್ತದೆ. ರಾಜನೀತಿ, ಜಾತಿಸಮಸ್ಯೆ, ಆತ್ಮ ಸಂತೃಪ್ತಿ ,ಎಲ್ಲವು ಕುರುಕ್ಷೇತ್ರದಲ್ಲಿ ಇದೆ . ಕೊನೆಯಲ್ಲಿ ನ್ಯಾಯಮೂರ್ತಿ ಅದ ಧರ್ಮದೇವತೆಯ ನಿಡುವ ಸಮಾಧಾನ ಹೇಳಿಕೆಯು ಪ್ರಮುಖವಾದುದು " ಧರ್ಮದ ಅಂಕೆಯಲ್ಲಿ "ನ್ಯಾಯ "ದ ಅಂಕೆಯಲ್ಲಿ "ಕಾರ್ಯ"ಇದ್ದರೆ ಜನಜೀವನ ಸುಭದ್ರ ವಿಪರೀತವಾದರೆ ಅನರ್ಥ " ಎಂಬಂಥ ಮಾತುಗಳು ತಾತ್ವಿಕ ವಿಚಾರ ಮಾಡಿಸುವಂತೆ ಮಾಡುತ್ತದೆ .


ನಿಜಕ್ಕೂ ,ಹಲವಾರು ವಿಚಾರಗಳು ಇಲ್ಲಿ ಮೂಡುತ್ತದೆ , ಕೋರ್ಟ್ ನಲ್ಲಿ ವಿಚಾರಣೆ ನಡೆಸುವ ರೀತಿ ಯಲ್ಲಿ ವಿಚಾರಣೆ ಮಾಡಿ ಕೊನೆಯಲ್ಲಿ ನ್ಯಾಯನಿರ್ಣಯ ಮಾಡುವುದು ಖುಷಿ ಕೊಡುತ್ತದೆ. ನಿರೂಪಣೆಯ ಅದ್ಭುತವಾಗಿದೆ .ಓದಿಸಿಕೊಂಡುಹೋಗುವ ಕೃತಿ "ಕುರುಕ್ಷೇತ್ರಕ್ಕೊಂದು ಆಯೋಗ ".