
ಮುಂಗಾರು ಮಳೆ ಎಂಬ ಮೃದುಲ ಹಿಟ್ ಚಿತ್ರ... ಮೊಗ್ಗಿನ ಮನಸು ಎಂಬ ಹುಡುಗಿಯರ ಬಾಳ ಕವಿತೆಯ ಚಿತ್ರ ಮಾಡಿ ಜನರಿಗೆ ನೀಡಿದ್ದ ಎಂ.ಕೃಷ್ಣಪ್ಪ ನವರ ಚಿತ್ರ... ಮುಂಗಾರು ಮತ್ತೆ ಬರಲು ಈ ಕಥೆಯೆ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ..ಶ್ರೀನಗರ ಕಿಟ್ಟಿ ಹಾಗು ತನ್ನ ಹನ್ನೋಂದು ಮಂದಿ ಗೆಳೆಯರ ಕತೆ ಈ ರೀಲ್ನಲ್ಲಿ....ನಾರಾಯಣ ಮತ್ತು ತನ್ನ ಹನ್ನೋಂದು ಮಂದಿ ಗೆಳೆಯರ ಕಥೆ ರಿಯಲ್ನಲಲ್ಲಿ?... ನಿಜಕ್ಕು...ಕಲಿಯದವರು,ಕಲಿತವರು,ಜೀವನದಲ್ಲಿ ಗೆದ್ದವರು,ಸೋತವರು ಎಲ್ಲರಿಗೂಬಾಂಬೆ ಎಂಬ ಮಾಯೆ ತನ್ನ ಕೈ ಚಾಚಿ ತಬ್ಬಿಕೊಲತ್ತಾಳೆ.ನಾರಾಯಣ್ ಅವರ ಜೀವನದಲ್ಲಿ ಆದದ್ದು ಅದೆ..ಹೊಟ್ಟೆ ಹೊರೆಯುವುದಕ್ಕಾಗಿ ಮಾಯಾಕೂಪದ ನಗರಿಗೆ ಪಾದ ಬೆಳೆಸಿದ ಅವರಿಗೆ ಮೋಸವಾಗಲಿಲ್ಲ.. ಯಾಕೆಂದರೆ ಬಾಂಬೆ ಯಾವತ್ತು ಯಾರಿಗೂ ಮೋಸಮಾಡುವುದಿಲ್ಲ ತುತ್ತು ಅನ್ನಕ್ಕೆ ಅಲ್ಲಿ ಎಂದೂ ಭರವಿಲ್ಲ. ಆದರೆ ಭದ್ರತೆ ಬಗ್ಗೆ ಅಲ್ಲಿಯಾರೂ ಖಾತ್ರಿಕೊಡುವುದಿಲ್ಲ.ನಾವೆ ನೋಡಿಕೊಳ್ಳಬೆಕು...ನಾರಾಯಣ ಹಾಗೂ ಅವರ ಹನ್ನೂಂದು ಮಂದಿ ಗೆಳೆಯರಿಗೆ ಹಡಗಿನಲ್ಲಿ ಕೆಲಸ ಸಿಕ್ಕಿತು...ಆದರೆ ಅವರ ಜೀವನದ ಹಡಗು ವಿರುದ್ದ ದಿಕ್ಕಿಗೆ ತಿರುಗಿತು..ಹಡಗು ಭಾರತೀಯ ಗಡಿ ದಾಟಿ ಪಾಕಿಸ್ತಾನದ ಬಾಗಿಲಿನಲ್ಲಿ ನಿಂತಿತ್ತು...ಮುಂದೆ 24 ವರ್ಷಗಳ ಕತ್ತಲ ಕೋಣೆಯ ಶಿಕ್ಷೆ ಜಾರಿ...ಅದರೆ ಇಷ್ಟಾದರೂ ಭಾರತದ ಪ್ರಧಾನಿಯಾಗಿದ್ದ.ಪ್ರಧಾನಿಯಾದ ಯಾರಿಗೂ ಈ ವಿಷಯ ಗಮನಕ್ಕೆ ಬರಲಿಲ್ಲ..ಇದೆ ಈ ಚಿತ್ರದ ಸಾರ.. ಹಾಗಂತ ನಿರ್ದೇಶಕ ದ್ವಾರ್ಕಿ ಅವರ ಶ್ರಮ ಕಥೆ ಕಟ್ಟುವಲ್ಲಿ ನಿಜವಾಗಿಯೂ ಇದೆ.ಚಿತ್ರಕ್ಕೋಂದು ಪ್ರೇಮ ಕಥೆ ನೀಡಿ ಸುಂದರ ಚಿತ್ರವಾಗಿಸಿದ್ದಾರೆ..!!! ನಾರಾಯಣ ಪಾಕ್ ಕಾಲಾಪಾನಿಗೆ ಹೊಗುವಾಗ ಅವರ ವರ್ಷ 24 ಬಿಡುಗಡೆಯಾದಾಗ..48..ಯೌವ್ವನ ಕತ್ತಲ ಕೋಣೆಯಲ್ಲಿ ನಶಿಸಿ ಹೊಗಿತ್ತು....
ಕಥೆ ಇರಬೇಕು ಮನಸ್ಸಿಗೆ ಮುಟ್ಟುವ ಹಾಗೆ...
ಬೆಂಗಳೂರೆಂದರೆ... ಸುಮ್ಮನೆ ಸರಿದು ಹೋಗುವ ಮೊಡವಲ್ಲ...ಇಲ್ಲಿನ ಗಲ್ಲಿ ಗಲ್ಲಿ ಜನರ ನಡುವೆ ಒಂದು ಕಥೆ ಇರುತ್ತದೆ. ಆ ಕಥೆ ಮಾತ್ರ ಸಿನಿಮಾವಾಗುತ್ತದೆ ಎಂಬ ಕಾಲವಿತ್ತು... ಹೌದು....ಹಿಂದೊಂದು ಕಾಲ ಹಾಗೆಯೆ ಇತ್ತು...ಯಾಕೆಂದರೆ ಆಗ ಗಾಂದಿನಗರ ಎಂಬ ಸಿನಿಮಾ ಲೋಕ ಬೆಂಗಳೂರಿಗರಿಗೆ ಮಾತ್ರ ಸೀಮಿತವಾಗಿತ್ತು..ಯಾವತ್ತು ಕಥೆ ನಮ್ಮ ಸುಪ್ತ ಮನಸ್ಸಿಗೆ ಇಷ್ಟವಾಗಬೇಕು...ಹಾಗೆ ಅಂತಹ ಕಥೆಯನ್ನು ಕ್ಯಾಮೆರಾ ಕಣ್ಣಿನಲ್ಲಿ ತೋರಿಸುವ ಕಲೆ ಇರಬೇಕು..
No comments:
Post a Comment
ನಿಮಗನಿಸಿದ್ದು....