Thursday, September 24, 2009

ಈ ಹೆಸರೆ ಯಾಕೆ ಅಂತಂದ್ರೆ....

ಮರಳಿನ ಮನೆ ......ಇಂತದ್ದೊಂದು ಹೆಸರು ನನ್ನ ಬ್ಲಾಗಿಗೆ ಇಡಬೇಕೋ ಬೇಡವೋ ಅಂತ ತುಂಬಾ ಜಿಜ್ನಾಸೆಯಲ್ಲಿದ್ದೆ. ಈ ಹೆಸರು ಉದ್ಭವವಾಗಿದ್ದೊಂದೇ ವಿಚಿತ್ರ .ಕವನಗಳು ನನ್ನ ಪಾಲಿಗೆ "ತಿರುಕನ ಕನಸು ". ಆದರೆ ಇತ್ತೀಚೆಗೆ ಪೆನ್ನು ಹಿಡಿದಾಗ ನಾಲ್ಕು- ನಾಲ್ಕು ಸಾಲಿನ ಇಪ್ಪತ್ತನಾಲ್ಕು ಸಾಲುಗಳುಕಣ್ಣು ಮುಚ್ಚುವಷ್ಟರಲ್ಲಿ ಬಂದವು.ಕೊನೆಯ ಸಾಲು ತುಂಬಾ ಇಷ್ಟವಾಗಿ ಬರೆದಿದ್ದೆ .
"ಸರಿಯೋ ತಪ್ಪೋ
ಮನಸ್ಸಂತೂ ಮರಳಿನ ಮನೆಯಾಗಿದೆ
ನೀರು ತಾಕಿದಾಗ
ಧರೆಗೆ ಬೀಳುವ ದಾರಿ ಕಾದಿದೆ "
ಈ ಸಾಲು ನನ್ನ ಗೆಳೆಯರೆಲ್ಲರಿಗೂ ಇಷ್ಟವಾಗಿತ್ತು . ಅದರಲ್ಲಿನ ಮರಳಿನ ಮನೆ ಎಂಬ ಶಬ್ದ "ಚಿಕ್ಕ ಮಕ್ಕಳಿಗೆ ಸಿಕ್ಕ ಲಾಲಿ ಪಾಪ್ "ನಂತಾಗಿತ್ತು .ಸಿಕ್ಕ -ಸಿಕ್ಕ ಕಡೆಯಲೆಲ್ಲ ಮರಳಿನ ಮನೆ ಎಂದು ಕೆತ್ತನೆ ಆರಂಭ ವಾಗಿತ್ತು
ಇಷ್ಟೆಲ್ಲಾ ಆದ ನಂತರ ನನ್ನ ಕನಸಿನ ಕೂಸು ಆದ ಬ್ಲಾಗಿಗೆ ಬೇರೆ ಹೆಸರಿಡುವ ಮನಸ್ಸಾಗಲಿಲ್ಲ .ಅದಕ್ಕಾಗಿಯೇ "ಮರಳಿನ ಮನೆ "ಎಂದು ನಾಮಕರಣ ಮಾಡಿದ್ದೇನೆ .ಈ ಹೆಸರಲ್ಲಿ ಹಲವಾರು ಅರ್ಥ ಗಳಿವೆ.
*ಮರಳಿಲ್ಲದೆ ಯಾರು ಮನೆಯನ್ನು ಕಟ್ಟುವುದಿಲ್ಲ ,ಹಾಗೆ ಬರಿ ಮರಳಿನಿಂದಲೇ ಯಾರು ಮನೆಯ ಕಟ್ಟುವುದಿಲ್ಲ .
*"ಸಾಗುತ ದೂರ ದೂರ " ಈ ಮರಳಿನ ಮನೆ ಎಂಬ ಬ್ಲಾಗು ಬರವಣಿಗೆಯಲ್ಲಿ ದೂರ ದೂರ ಸಾಗುತ್ತಲಿರಬೇಕು ಎಂಬ ಹಂಬಲದೊಂದಿಗೆ .....ಈ ಬ್ಲಾಗ್ ಮಂಡಲ ....