Friday, November 6, 2009

ಕಷ್ಟ ಪಡದೆ ಮನುಷ್ಯ ಜೀವನದಲ್ಲಿ ಮೇಲೆ ಬರಲಾರ ...........


"ನನ್ನ ಜೀವನದ ಕಷ್ಟ ಗಳು ,ಸಂಕಟಗಳು ,ದುಃಖಗಳು ನನ್ನಿಂದ ಕವಿತೆ ಬರೆಯುವಂತೆ ಮಾಡಿಸಿತು ,ಇಲ್ಲದಿದ್ದರೆ ಸಾಮಾನ್ಯ ಕಲ್ಲು ಕುಟಿಗನ ಮಗನಾಗಿದ್ದವನು ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ". ಆಳ್ವಾಸ್ ನುಡಿಸಿರಿಯ ಎರಡೆನೇ ದಿನದ ಕವಿಸಮಯದ ಕಾರ್ಯಕ್ರಮದಲ್ಲಿ ಕವಿ ಸತ್ಯಾನಂದ ಪಾತ್ರೋಟ ಈ ಮಾತನ್ನು ಹೇಳಿದಾಗ ಆ ಮಾತಿಗೆ ನನ್ನ ಯೋಚನೆ ಸೇರಿಸುವುದು ಅನಿವಾರ್ಯವಾಗಿತ್ತು.
ನಾವು ಕನ್ನಡ ಸಾಹಿತ್ಯದಲ್ಲಿ ಅಥವಾ ಬೇರೆ ಸಾಹಿತ್ಯ ಗಳಲ್ಲಿರುವ ಕವಿಗಳನ್ನು, ಅವರ ಹಿಂದಿನ ಇತಿಹಾಸ ಕೆದಕಿದಾಗ ಎಲ್ಲ ಕಡೆ ಇಂತ್ತದ್ದೊಂದು ಕಷ್ಟಗಳು ,ಸಂಕಟಗಳು ,ಒಂದುತುತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ಕವಿಗಳು ಸಿಗುತ್ತಾರೆ."ಕಷ್ಟ ಪಡದೆ ಯಾವ ಮನುಷ್ಯನು ಜೀವನದಲ್ಲಿ ಮೇಲೆ ಬರಲಾರ" ಎಂಬ ತತ್ವ ವನ್ನು ನಂಬಿದವನು ನಾನು .ಆದರೆ ಎಲ್ಲ ಕಷ್ಟ ಗಳು ಕವಿಗಳಿಗೆ ಏಕೆ ಬರುತ್ತದೆಎಂಬ ಪ್ರಶ್ನೆಗೆ ನನಗಿನ್ನೂ ಉತ್ತರ ಸಿಕ್ಕಿಲ್ಲ . ಹಾಗೇನು ನಾನು ಕವಿಗಳನ್ನು ತೆಗಳುತ್ತಿಲ್ಲ "ಒಂದು ಮಾತು ಹೇಳಬಲ್ಲೆ ನಾವೆಲ್ಲರೂ ಮಾತನಾಡಿ ನಮ್ಮ- ನಮ್ಮ ದುಃಖ ವನ್ನು ನಿಗಿಸಿಕೊಳ್ಳುತ್ತೇವೆ. ಆದರೆ ಸಾಹಿತಿಗಳು ,ಕವಿಗಳಿಗೆ ಅಕ್ಷರವೇ ಮಾತು ,ಅಕ್ಷರವಿಲ್ಲದೆ ಅವರಿಲ್ಲ . ಅದರಿಂದಲೇ ಅವರ ದುಃಖವನ್ನು ತೋಡಿಕೊಳ್ಳುತ್ತಾರೆ " ಇದಕ್ಕೆ ಉತ್ತಮ ಉದಾಹರಣೆಯಾಗಿ ದ.ರಾ. ಬೇಂದ್ರೆ ಸಿಗುತ್ತಾರೆ ಹುಟ್ಟಿನಿಂದ ಸಾಯುವವರೆಗೂ ಕಷ್ಟದಲ್ಲೇ ಬದುಕಿದವರು ಇವರು , ತನ್ನ ಮಗ ತೀರಿಹೋದಾಗ ಅವರ ಹೆಂಡತಿ ಅವರನ್ನೇ ನೋಡುತ್ತಿರುವುದನ್ನು ಗಮನಿಸಿ ಅಂತ ದುಃಖ ದಲ್ಲೂ "ನಿ ಹಿಂಗ ನೋಡ ಬ್ಯಾಡ ನನ್ನ " ಎಂದು ಗೀತೆ ರಚಿಸಿದವರು. ಕಷ್ಟ ಸಂಕಟ ಗಳು ಮನುಷ್ಯನನ್ನು ಪರಿಪಕ್ವ ನನ್ನಾಗಿಸುತ್ತದೆ . ಅವರ ಅನುಭವಗಳು ಅಕ್ಷರ ರೂಪ ಪಡೆದು ಕವನವಾಗಿ ಹುಟ್ಟುವುದೇ ರೋಚಕ . ಇಂತ ಕವಿ ಗಳಿಗೆ ನನ್ನ ಪ್ರಣಾಮಗಳು ..........