Saturday, October 3, 2009

ಸಂಜಯ್ ಅಂದ್ರೆ....ಇಂದಿರಾ ಗಾಂಧಿ ಮಗ ಅಲ್ವ.....


"ಇಂದಿರೆಯ ಮಗ ಸಂಜಯ" ನೆಹರು-ಇಂದಿರಾ ಗಾಂಧಿ -ಸಂಜಯ್ -ರಾಜೀವ್-ಸೋನಿಯಾ-ಮೇನಕಾ ಗಾಂಧಿ ವ್ಯಕ್ತಿತ್ವಗಳ ನಿರೂಪಣೆ .ಬೆಳೆಗೆರೆ ಹೇಳಿದ್ದಕ್ಕೆ ಭಿನ್ನವಾಗಿ ಹೇಳುವುದಾದರೆ ,ಆತ ಪುಂಡ ,ಒಳ್ಳೆಯ ವಿದ್ಯಾರ್ಥಿ ಅಲ್ಲವೇ ಅಲ್ಲ ,ರಾಜಕಾರಣ ತಿಳಿದಿತ್ತು ,ಇಂದಿರಾಗೆ ಒಳ್ಳೆಯ ಮಗನಾಗಲಿಲ್ಲ,ರಾಜೀವನಿಗೆ ಒಳ್ಳೆಯ ತಮ್ಮನಾಗಲಿಲ್ಲ,ಕಪಟ ಉದ್ಯಮಿ ಆದ ,ಇವಿಷ್ಟು ಸಂಜಯ್ ಗಾಂಧೀ.
ರವಿ ಬೆಳೆಗೆರೆ ಹೇಳಿದಂತೆ ,give the devil it's share ಅಂತಾರೆ ,ಇತಿಹಾಸ ಎಂತವನಿಗಾದರೂ ತನ್ನ ಸವಿಸ್ತಾರ ಶಿಲಾಶಾಸನ ದಲ್ಲಿ ಒಂದು ಸಾಲಿನಸ್ಟು ಜಾಗ ಕೊಟ್ಟೆ ಕೊಡುತ್ತದೆ .ಅದಕ್ಕೆ ಈತ ಅರ್ಹ .ಆತನಲ್ಲಿರುವ ಅಪರೂಪದ ಗುಣಗಳು ಮಾದರಿಯಾಗಬೇಕು .ಸಮಸ್ಯೆಗಳು ತಿಳಿದಿತ್ತು ಆದರೆ ಅದಕ್ಕೆ ಸ್ಪಂದಿಸುವ ರೀತಿಯಲ್ಲಿ ಸೋತಿದ್ದ .ಪುಸ್ತಕ ಓದುತ್ತ ಹೋದಂತೆ ನಂಬರ್ 1 ,ಸಫ್ದರ್ಜಂಗ್ ರಸ್ತೆಯ ಬಂಗಲೆ (ಪ್ರಧಾನಿ ಬಂಗಲೆ ) ಕರಾಳ ಅಧ್ಯಾಯ ಕಣ್ಣ ಮುಂದೆ ಬರುತ್ತದೆ .ಈ ಪುಸ್ತಕ ಓದಿದಂತೆ ಇಂದಿರಾಗಾಂಧಿ -ಸಂಜಯಗಾಂಧಿ ಜೀವನ ವಿಚಿತ್ರ ಅನಿಸಬಹುದು .ಆದರೆ ಆಡಳಿತದ ರೀತಿ ನೋಡಿ ವಿಪರೀತ ಸಿಟ್ಟು ಬರುತ್ತದೆ .ಇಂದಿರಾ ಆಡಳಿತದಲ್ಲಿ ಸಂಜಯ್ ಎಷ್ಟು ಬೆರೆತಿದ್ದ ಎಂದು ಆತ ಸತ್ತ ನಂತರ ನಡೆಯುವ ಅವಾಂತರಗಳೇ ಬಿಡಿಸಿ ಹೇಳುತ್ತಿದ್ದವು
"ಸಂಜಯ್ ಬದುಕಿದ್ದರೆ ಆಪರೇಷನ್ ಬ್ಲೂ ಸ್ಟಾರ್ ಪ್ರಕರಣ ನಡೆಯುತಿತ್ತಾ ....?ಎನ್ನುವ ಪ್ರಶ್ನೆ ಪುಸ್ತಕದ ಕೊನೆಯ ಹಾಳೆ ಓದಿದಾಗ ಮೂಡುವುದು ಸಹಜ. ವಿನೋದ್ ಮೆಹ್ತಾ ರವರ "ಸಂಜಯ್ ಸ್ಟೋರಿ "ಎಂಬ ಉತ್ತಮ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ ರವಿ ಬೆಳೆಗೆರೆ ಅವ್ರಿಗೆ ಥ್ಯಾಂಕ್ಸ್ ಹೇಳಲೇಬೇಕು .
ಪ್ರತಿಯೊಬ್ಬರೂ ಭಾರತದ ಇತಿಹಾಸ ತಿಳಿದುಕೊಳ್ಳಬೇಕಾದ್ದು ಅಗತ್ಯ. ಎಲ್ಲರ ಮನೆಯ ದೋಸೆ ತೂತು ಎಂಬ ಗಾದೆ ನೆನಪಾಗುವುದು ಸಹಜ .ತುರ್ತು ಪರಿಸ್ತಿತಿ ಯ ಹೀನಾಯ ಪರಿಸ್ಥಿತಿಯಿಂದ ಕಾಂಗ್ರೆಸನ್ನು ಅಧಿಕಾರದ ಗದ್ದುಗೆ ಏರಿಸಿದ ಕೀರ್ತಿ ಸಂಜಯ್ ಗಾಂಧಿಗೆ ಸಲ್ಲಬೇಕು .
ವಿಮಾನ ಚಾಲನೆ ಗೊತ್ತಿಲ್ಲದವ ಆಗಸದಲ್ಲಿ ಮಾಯವಾದ (ಸಂಜಯ್),ರಾಜಕಾರಣ ಗೊತ್ತಿಲ್ಲದವ ರಾಜಕೀಯದಿಂದ ನಶಿಸಿ ಹೋದ (ರಾಜೀವ್) ಎಂತ ವಿಪರ್ಯಾಸ .ನೀವು ಕೊಂಡು ಓದಿ ಅದ್ಭುತ ಪುಸ್ತಕ .ಓದಿದ ನಂತರ ನಿಮಗೂ ಸಂಜಯ್ ನ ಬಗ್ಗೆ ಏನಾದರು ಅನಿಸಬಹುದು ....

No comments:

Post a Comment

ನಿಮಗನಿಸಿದ್ದು....