Thursday, December 10, 2009

ಬೇಕು ಇಂತದ್ದೊಂದು ಸಮ್ಮೇಳನ ನಾಡು-ನುಡಿಯ ರಕ್ಷಣೆಗೆ...

ಇನ್ನು ಹೆಚ್ಚೇನು ದಿನಗಳಿಲ್ಲ. ನಮ್ಮ ನಾಡು-ನುಡಿ ರಕ್ಷಣೆಗಾಗಿ ನಾವುಗಳು ಮುಂದೆ ತುಂಬಾ ಕಷ್ಟಪಡಬೇಕು. ಅತ್ತ ಬೆಳಗಾವಿ ಮಹರಾಷ್ಟ್ರಕ್ಕೆ ಇನ್ನು ಕೆಲವೆ ದಿನಗಳಲ್ಲಿ ಸೇರಬಹುದು. ಕಾಸರಗೋಡುನ್ನು ಕೇರಳದವರು ಬೇಕೆಂದು ಬಡಿದುಕೊಳ್ಳತ್ತಿದ್ದಾರೆ.ತಮಿಳುನಾಡು ಮತ್ತು ಆಂಧ್ರಪ್ರದೇಶದ್ದು ಇದೆ ಕತೆ. ಇಂಥ ಸಂದರ್ಭ ದಲ್ಲಿ ನಡೆಸುವ ಸಾಹಿತ್ಯಸಮ್ಮೇಳನಗಳು ಬರಿ ಗಲಾಟೆ ಕೇಂದ್ರ ಗಳಾಗಿವೆ. ಈ ಸಂದರ್ಭದಲ್ಲಿ ಕನ್ನಡಿಗರ ಮನ ಗೆದ್ದು ಆರು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವ ಆಳ್ವಾಸ್ ನುಡಿಸಿರಿ ಬಗ್ಗೆ ವಿಶೇಷ ಲೇಖನ.
೨೦೦೯ ರ ನುಡಿಸಿರಿಯನ್ನು ಉದ್ಘಾಟಿಸಿದವರು ಸಾಹಿತಿ. ಚಿಂತಕ ಹಂ,ಪ,ನಾಗರಜಯ್ಯ ಇವರು ಮಾತನಾಡಿ ವ್ಯಕ್ತಿಗಳಿಗೆ ಮುಪ್ಪು ಮರೆವು ಮರಣ ವಿದ್ದರೂ ಕನ್ನಡಕ್ಕಿಲ್ಲ.ಅದರ ಅಗಾಧ ಶಕ್ತಿಯ ಬೇರಿಗೆ ಎಲ್ಲರೂ ನೀರುಣಿಸಿದ ಕಾರಣ ಕನ್ನಡ ಸರ್ವ ಜನಾಂಗದ ಆಸ್ತಿ. ಹೀಗೆ ಕನ್ನಡಕ್ಕೆ ಜನರ ,ಸಾಹಿತಿಗಳ, ವಿಮರ್ಶಕರ ಕೊಡುಗೆಗಳಿಂದ ಈ ಭಾಷೆ ಈ ಮಟ್ಟಕ್ಕೆ ಬೆಳದಿದೆ. ನಿಜಕ್ಕೂ ನಮ್ಮ ನುಡಿ ರಕ್ಷಣೆಗಾಗಿ ನುಡಿಸಿರಿ ನೀಡುತ್ತಿರುವ ಕೊಡುಗೆ ಅಪಾರ. ಈ ಸಮ್ಮೇಳನದಲ್ಲಿ ನಾಲ್ಕು ವೇದಿಕೆಗಳಲ್ಲಿ ನಡೆಯುವ ಕಾರ್‍ಯಕ್ರಮಗಳು ಕಣ್ಣಿಗೆ ಹಬ್ಬದೂಟ ಉಣಬಡಿಸುತ್ತವೆ. ಪ್ರಧಾನ ವೇದಿಕೇಯಾದ ರತ್ನಾಕರವರ್ಣಿ ವೇದಿಕೆಯಲ್ಲಿ ಬೆಳಗಿನಿಂದ ಕಾರ್‍ಯಕ್ರಮಗಳು ನಡೆದರೆ, ಇನ್ನು ಕು.ಶಿ. ಹರಿದಾಸ ಭಟ್ಟ ವೇದಿಕೆ, ಯಕ್ಷಮಂಟಪ, ಹಾಗೂ ಕೆ. ವಿ ಸುಬ್ಬಣ್ಣ ಬಯಲು ರಂಗ ಮಂದಿರ ಸಂಜೆಯಾಗುತ್ತಿದ್ದಂತೆ ಗರಿ ಬಿಚ್ಚಿಕೊಳ್ಳುತ್ತವೆ. ಪ್ರಧಾನ ವೇದಿಕೆಯ ವಿನ್ಯಾಸ ನಿಜಕ್ಕೂ ಗಮನಸೆಳೆಯುವಂತದ್ದು, ಹಾಗೆ ವೇದಿಕೆಯಲ್ಲಿ ಬೆಳಿಗ್ಗೆ ೮;೩೦ ರಿಂದ ಆರಂಭವಾಗುವ ಕಾರ್‍ಯಕ್ರಮಗಳು ರಾತ್ರಿ ೯;೦೦ ಗಂಟೆಯ ವರೆಗೂ ಅವಿರತವಾಗಿ ನಡೆಯುತ್ತದೆ. ಹೀಗೆ ಕಾರ್‍ಯಕ್ರಮಗಳು ನಡೆದರೂ ಎಲ್ಲೂ ಬೇಸರ ತರಿಸುವುದಿಲ್ಲ. ಇಲ್ಲಿ ಭಾವಲಹರಿ, ಕವಿಸಮಯ, ಕವಿನಮನ, ವಿಚಾರ ಗೋಷ್ಠಿ, ಕಥಾಸಮಯ ದಂತ ಹಲವು ಪ್ರಕಾರದ ಕಾರ್‍ಯಕ್ರಮಗಳು ಇಲ್ಲಿ ನಡೆಯುತ್ತವೆ. ಹಾಗೆ ಸಂಜೆ ಐದು ಗಂಟೆ ಗೆ ನಡೆಯುವ ಮಾತಿನ ಮಂಟಪ ಕಾರ್‍ಯಕ್ರಮದಲ್ಲಿ ನಾಡಿನ ಖ್ಯಾತ ಹಾಸ್ಯಗಾರರು ನಗಿಸುವ ಪರಿ ಅದ್ಭುತ..
ಭಾಷೆ ಸಾಹಿತ್ಯದ ವಿಚಾರ ಬಂದಾಗ ನುಡಿಸಿರಿಯಲ್ಲಿ ನಡೆಯುವ ಕಾರ್‍ಯಕ್ರಮಗಳು ಎಲ್ಲರಿಗೂ ಮಾದರಿ. ಈ ಸಂದರ್ಭದಲ್ಲಿ ನಡೆಯುವ ಪುಸ್ತಕ ಪ್ರದರ್ಶನ ಮತ್ತು ಮಾರಟದಲ್ಲಿ ನಾಡಿನ ಖ್ಯಾತ ಪ್ರಕಾಶನಗಳು ಇಲ್ಲಿಗೆ ಬರುತ್ತವೆ. ಈ ವರ್ಷ ಕಾಲೇಜಿನ ಎದುರಿಗೆ ಪ್ರದರ್ಶನಕ್ಕಿಟ್ಟಿರುವ ಚಿತ್ರಗಳು , ಅಕ್ವೆರಿಯಂಗಳು, ಕಾಲೇಜಿನ ಬಲಭಾಗ-ಎಡಭಾಗದಲ್ಲಿರುವ ಬೃಹತ್ ಯಕ್ಷಗಾನ ಪ್ರತಿಮೆಗಳು ನೋಡುಗರ ಮನಸ್ಸನ್ನು ಸೂರೆಗೊಳ್ಳುತ್ತದೆ. ನಿಜಕ್ಕೂ ಆಳ್ವಾಸ್ ನುಡಿಸಿರಿಯಲ್ಲಿ ಯಥೇಚ್ಛವಾಗಿ ಕಾಣ ಸಿಗುವುದು ಅಲ್ಲಿನ ವಿದ್ಯಾರ್ಥಿಗಳ ಶಿಸ್ತು. ಊಟದ ವ್ಯವಸ್ಥೆಯಲ್ಲಿ,ಸಹಾಯದಲ್ಲಿ, ನಗುಮುಖದ ಅವರ ಆದರ ಆದಿತ್ಯಗಳನ್ನು ಕಂಡಾಗ ಮನ ಖುಷಿಗೂಳ್ಳುತ್ತದೆ. ಕನ್ನಡ ಮನಸ್ಸು -ಸಮನ್ವಯದೆಡೆಗೆ ಎಂಬ ಪರಿಕಲ್ಪನೆ ಯಲ್ಲಿ ಆರಂಭವಾಗಿರುವ ಈ ವರ್ಷದ ನುಡಿಸಿರಿ ಯಶಸ್ವಿಯಗಿ ಆರಂಭವಾಗಿದೆ. ಇಂತದ್ದೂಂದು ಸಮ್ಮೇಳನ ನಾಡು -ನುಡಿಯ ರಕ್ಷಣೆಗೆ ನಿಜವಾಗಿಯೂ ಅಗತ್ಯವಿದೆ ಎಂದೆನಿಸುವುದಿಲ್ಲವೆ.

No comments:

Post a Comment

ನಿಮಗನಿಸಿದ್ದು....