ಅವನು ಯಾವ ಚಿತ್ರವನ್ನೂ ಹಣಗಳಿಸಬೇಕು,ಜನರಿಗೆ ಮಾಧ್ಯಮಗಳ ಬಗ್ಗೆ ಪರಿಚಯವಾಗಬೇಕು ಎಂದು ಮಾಡಿದವನೇ ಅಲ್ಲ.ತನ್ನಿಷ್ಟಕ್ಕಾಗಿ ಚಿತ್ರಿಸುತ್ತಿದ್ದ ಅಲ್ಲಿ ಸಮಾಜದ ಒಳಿತು ಕೆಡುಕು ಗಳನ್ನು ಹೊರಗೆ ಹಾಕುತ್ತಿದ್ದ ಬದುಕಿನ ಆಡುಂಬೋಲಗಳಿಗೆ ತನ್ನದೆ ಆದ ಯೋಚನೆಯಲ್ಲಿ ಚಿತ್ರ ರೂಪವನ್ನು ನೀಡುತ್ತಿದ್ದ. ಅದೇ ಅವನ ಗೆಲುವನ್ನು ಬರೆಯುತ್ತದೆ ಎಂಬ ಯಾವ ಸುಳಿವೂ ಆತನಿಗಿರಲಿಲ್ಲ;ಗೆದ್ದುಬಿಟ್ಟ!
ಆತನ ಹೆಸರು ಫಾಸ್ ಬೈಂಡರ್...
ಜರ್ಮನ್ ಚಿತ್ರ ಜಗತ್ತು ಇವನನ್ನು ಮರೆತರೂ, ವಿಶ್ವದ ಚಿತ್ರಪ್ರೇಮಿಗಳು ಈತ ನಿರ್ದೇಶಿಸಿದ ಚಿತ್ರಗಳ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಬೈಂಡರ್ ಮೂಸೆಯಲ್ಲಿ ಅರಳುವ ಸಿನಿಮಾಗಳು ವಾಸ್ತವ ಜಗತ್ತನ್ನು ಪರಿಚಯಿಸುತ್ತವೆ. ಬಾಲ್ಯದಲ್ಲಿ ಕಂಡ ,ಕಷ್ಟ-ಸುಖಗಳ ಬಗ್ಗೆ, ಬದುಕಿನ ಜಂಜಾಟ, ಆರ್ಥಿಕತೆಯ ತೋಳಲಾಟದ ಬಗ್ಗೆ ಫಾಸ್ ಮಾತ್ರ ಮನಮುಟ್ಟುವಂತೆ ಚಿತ್ರಿಸಿದ್ದಾನೆ. ಆತನ ಚಿತ್ರಕ ಶಕ್ತಿಗೆ ಸಲಾಂ ಹೊಡೆಯುತ್ತದೆ ಚಿತ್ರರಂಗ.ಬರೇ 37 ವರ್ಷ ಮಾತ್ರ ಬದುಕಿದ ಈತ 16 ವರ್ಷಗಳನ್ನು ಚಿತ್ರರಂಗದಲ್ಲಿಯೇ ಕಳೆದುಬಿಟ್ಟ.ಈ ವೇಳೆಯಲ್ಲೇ 44 ಚಿತ್ರ ನಿರ್ದೇಶಿಸಿ ತನ್ನ ಪ್ರಚಂಡ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದ. ಈ ಚಿತ್ರಗಳು ಎಂದಿಗೂ ನಮ್ಮ ನಿರೀಕ್ಷೆಯನ್ನು ಹುಸಿ ಮಾಡಲಾರವು.
ಹಾಗೆ ಕಳೆಯಿತು ಬಾಲ್ಯ...
1945ರ ಮೇ11ರಲ್ಲಿ ಜರ್ಮನ್ ನ ಬಡ ಮಧ್ಯಮ ವರ್ಗದಲ್ಲಿ ಜನಿಸಿದ ಬೈಂಡರ್ ಗೆ ಬಡತನ ಆಟದ ವಸ್ತುವಾಯಿತು.ಅಪ್ಪ ಸಾಮಾನ್ಯ ಫಿಸಿಶಿಯನ್,ತಾಯಿ ಅನುವಾದಕಿ. ಕಲಿಯಲು ಹೆಚ್ಚೇನೂ ಆಸಕ್ತಿ ವಹಿಸಲಿಲ್ಲ. ಜರ್ಮನ್ ಆರ್ಥಿಕತೆಯ ಬಗ್ಗೆ ನನಗೇನೂ ತಿಳಿದಿದೆ ಅದನ್ನು ನನ್ನ ಮಾಧ್ಯಮದಲ್ಲಿ ತೋರಿಸಬೇಕು ಅನ್ನುವ ಅವನ ಅದಮ್ಯ ಆಸೆ ಸಿನಿಮಾ ಮಾಧ್ಯಮದೆಡೆಗೆ ಆತನನ್ನು ತಿರುಗಿಸಿತು.ಕಣ್ಣಲ್ಲಿ ಚಿತ್ರಗಳ ಬಗ್ಗೆ ವಿಪರೀತ ಕನಸುಗಳನ್ನು ಹೊತ್ತುಕೊಂಡು 1965 ರಲ್ಲಿ ಬರ್ಲಿನ್ ಫಿಲ್ಮ್ ಆಂಡ್ ಟೆಲಿವಿಷನ್ ಅಕಾಡೆಮಿಗೆ ಪ್ರವೇಶ ಪರೀಕ್ಷೆ ಬರೆಯುತ್ತಾತನೆ. ಅಲ್ಲಿ ಆತ ಫೇಲ್!!
ಇಂತಹ ಅಕಾಡೆಮಿಗೆ ಪ್ರವೇಶ ಪಡೆದು ಅವರು ಹೇಳುವ ರೀತಿಯಲ್ಲಿ ಚಿತ್ರ ನಿರ್ದೇಶಿಸುವ ಬದಲು ತನ್ನ ಕಲ್ಪನೆ ಗೆ ಬಂದಂತೆ ಚಿತ್ರ ಮಾಡಬೇಕು ಎನ್ನುವ ಪ್ರಯತ್ನವಾಗಿ ಅದೇ ವರ್ಷ ದಿ ಸಿಟಿ ಟ್ರ್ಯಾಂಪ್ ಎನ್ನುವ ಹತ್ತು ನಿಮಿಷದ ಕಿರು ಚಿತ್ರ ನಿರ್ಮಿಸಿ ಅದರಲ್ಲಿ ಯಶಸ್ವಿಯಾಗುತ್ತಾತನೆ. ಗ್ರಂಥ ಬರೆಯುವ ಮುನ್ನ ಪೀಠಿಕೆ ಎಂಬಂತೆ ಇದ್ದ ಆ ಚಿತ್ರ ಆತನ ಬದುಕಿನ ದಿಕ್ಕನ್ನೇ ಬದಲಿಸುತ್ತದೆ ಅಂದರೆ ಆ ಹತ್ತು ನಿಮಿಷಕ್ಕಾಗಿ ಆತ ಅದೆಷ್ಟು ಕಷ್ಟಪಟ್ಟಿರಬೇಡ?
ಕಿರು ಚಿತ್ರ ನಿದೇಶಿಸಿದ ಧೈರ್ಯ ಆತನನ್ನು ಬೆಳ್ಳಿತೆರೆಗೆ ಎಳೆಯಿತು.ಅ ಕಾರಣಕಕ್ಕೆ ಅತ 1969ರಲ್ಲಿ ಲವ್ ಇಸ್ ಕೋಲ್ಡರ್ ದೆನ್ ಡೆತ್ ಚಿತ್ರ ಮಾಡಿದ.ಪ್ರೇಮ-ಜೀವನ-ಸಾವು ಎಂದು ಮೂರು ವಿಷಯಗಳನ್ನಿಟ್ಟುಕೊಂಡು ಬದುಕಿನ ಪ್ರತಿ ಎಳೆಯನ್ನು ಸವಿವರವಾಗಿ ಬಿಡಿಸಿಟ್ಟ.ಚಿತ್ರ ಬಾಕ್ಸ ಆಫೀಸ್ ನಲ್ಲಿ ಮುಗ್ಗರಿಸಿತು.ಅದು ತಮ್ಮದೇ ತಪ್ಪು ಎಂಬುದು ಜರ್ಮನ್ ಜನತೆಗೆ ಅನಂತರ ತಿಳಿಯಿತು.ಅದೇವರ್ಷ ಕಾಟ್‌ಜೆಲ್‌ಮೆಚ್‌ರ್ ಎಂಬ ಚಿತ್ರ ಮಾಡಿದ ಸುಮಾರಾಗಿ ಗೆದ್ದಿತು.
ಇದು ಮೊದಲ ಗೆಲುವು..
ಬಿವೇರ್ ಆಫ್ ಹೋಲಿ ವೋರ್ (1971) ಹೀಗೆ ಪ್ರತಿ ವರ್ಷ ಸಿನಿಮಾ ಮಾಡುತ್ತಲೆ ಬಂದ.ಆದರೂ ತಾನಿನ್ನೂ ಒಂದೇ ಒಂದು ಹಿಟ್ ಚಿತ್ರ ನೀಡಲಿಲ್ಲ ಎಂಬ ಕೊರಗು ಆತನನ್ನು ಕಾಡುತ್ತಲೇ ಇತ್ತು. 1972 ರಲ್ಲಿ ಆತ ನಿರ್ದೇಶಿಸಿದ ಮರ್ಚೆಂಟ್ ಆಫ್ ಪೋರ್ ಸಿಸನ್ಸ್ ಚಿತ್ರ ವನ್ನು ಜನ ಬಹುವಾಗಿ ಇಷ್ಟಪಟ್ಟರು.ಇಲ್ಲಿ ಬರುವ ಪ್ರತಿ ಪಾತ್ರವನ್ನು ಅಷ್ಟು ಮುತುವರ್ಜಿಯಿಂದ ಪೋಷಿಸಿದ್ದ.ಒಬ್ಬ ಪೋಲಿಸ್ ಅಧಿಕಾರಿ ಅಮಾನತುಗೊಂಡು ಹಣ್ಣು ವ್ಯಾಪಾರ ಮಾಡಲು ಅರಂಭಿಸುವ ಕತೆ ಇದರಲ್ಲಿತ್ತು ಜರ್ಮನ್ ಜನತೆ,ಆರ್ಥಿಕ ಸಂಕಷ್ಟ. ಕುರುಡು ಪ್ರೀತಿ,ಕಾಮ ಎಲ್ಲವನ್ನು ಬಿಡಿಸಿಟ್ಟ.ಈ ಚಿತ್ರ ಆತನ ಪಾಲಿಗೆ ಟರ್ನಿಂಗ್ ಪಾಯಿಂಟ್ ಆಯ್ತ.ಕನಸು ಕಂಗಳಲ್ಲಿ ಬಣ್ಣದ ಬದುಕಿಗೆ ಬಂದಿದ್ದ ಬೈಂಡ್‌ರ್‌ನನ್ನು ಅಲ್ಲಿನ ಜನ ತುಂಬು ತೋಳಿನಲ್ಲಿ ಅಪ್ಪಿಕೊಂಡರು.
ಪ್ರಶಸ್ತಿ ತಂದ ಚಿತ್ರ..
ಮರ್ಚೆಂಟ್ ಆಫ್ ಪೋರ್ ಸಿಸನ್ಸ್ ಚಿತ್ರಜನ ಮೆಚ್ಚಿದರೂ ಪ್ರಶಸ್ತಿ ಗಳಿಸಲಿಲ್ಲ.ಅದರೂ ಆತ ಎಂದು ಅದಕ್ಕಾಗಿ ಹಂಬಲಿಸಿದವನೇ ಅಲ್ಲ. ಅದರೂ ಟೀಕಿಸುವವರು ಅದೇ ಕಾರಣವನ್ನೆ ನೆಪ ಮಾಡಿಕೊಂಡು ಹಂಗಿಸುತ್ತಿದ್ದರು.1974 ರಲ್ಲಿ ಬಂದ ಅಲಿ-ಫಿಯರ್ ಈಟ್ಸ ದ ಸೋಲ್ ಅತನಿಗೆ ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಟ್ಟಿತು. ಆ ವರ್ಷ ದ ಕ್ಯಾನ್ಸ್ ಫಿಲ್ಪ್ರಶಸ್ತಿ ಬಾಚಿಕೊಂಡಿತು.ಜರ್ಮನ್ ಕೆಲಸಗಾರ್ತಿ ಹಾಗೂ ಮೊರೆಕಕ್ೂದ ಅಲೆಮಾರಿ ಕಾರ್ಮಿಕನ ನಡುವಿನ ಪ್ರೇಮ ಕಥೆ ಆಧಾರಿತ ಈ ಚಿತ್ರ ಜನರ ಮನಸೂರೆಗೊಂಡಿತು. ಕಾದಂಬರಿ ಆಧಾರಿತ ಚಿತ್ರಕಕ್ು ಸೈ..ಬರಿ ಸಮಾಜ,ಜೀವನ ಬಗ್ಗೆ ಮಾತ್ರ ಚಿತ್ರ ಮಾಡುತಾ್ತನೆ,ಅತ ಕಂಡ ಬದುಕು ಎಲ್ಲರದ್ದೂ ಆಗಿರುವುದಿಲ್ಲ ಎಂದವರಿಗೆ 1977 ರಲ್ಲಿ ವಾಲ್ಡಿಮರ್ ನಬಕ್ೀವ್‌ರ ಕಾದಂಬರಿಯನ್ನು ಡಿಸ್ಪೈರ್ ಎಂಬ ಚಿತ್ರ ಮಾಡಿದ.
ಕೊನೆಗಾಲ..
1982 ನಿರ್ದೇಶಿಸಿದ ಕಾವರಲ್ಲೂ ಆತನ ಕೊನೆಯ ಚಿತ್ರ. ಬದುಕಿನ ಉತ್ತುಂಗ ಕಾಲದಲ್ಲಿ ಕೋಕೆನ್ ದಾಸನಾಗಿದ್ದ .ವಿಪರೀತ ಮಾದಕ ದ್ರವ್ಯ ಸೇವನೆ ಆತನ ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿತ್ತು.1982ರ ಜೂನ್ 10 ರಂದು ಮ್ಯೂನಿಚ್‌ನ ಅಪಾರ್ಟಮೆಂಟ್‌ನಲ್ಲಿ ಶವವಾಗಿ ಬಿದ್ದಿದ್ದ. ನಿದ್ರೆ ಮಾತ್ರ ಸೇವಿಸಿದ್ದರಿಂದ ಹೃದಾಯಾಘಾತ ವಾಗಿತ್ತು ಎಂದು ನಂತರ ಬಂದ ಶವ ಪರೀಕ್ಷೆ ವರದಿಗಳು ತಿಳಿಸಿದವು.ಅದರೆ ಅಲ್ಲಿನ ಜನತೆ ಹಾಗು ಆತನ ಅಭಿಮಾನಿಗಳು ಆತನ ಏಳಿಗೆಯನ್ನು ಸಹಿಸಲಾರದೆ ಆತನ ವಿರೋಧಿಗಳು ಆತನನ್ನು ಕೊಲೆ ಮಾಡಿದ್ದಾರೆ ಎಂದು ಶಂಕಿಸುತ್ತಾರೆ.
ಮುಂದಿನ ಚಿತ್ರಕ್ಕೆ ಚಿತ್ರಕತೆ ಸಿದ್ಧಪಡಿಸಿದ್ದ..
ಆತನ ಕೋಣೆಯಲ್ಲಿ ಆತ ತನ್ನ ಮುಂದಿನ ಚಿತ್ರ ರೋಸಾ ಲುಕ್ಸಂಬರ್ಗ್‌ಗಾಗಿ ಚಿತ್ರಕಥೆ ಸಿದ್ಧಪಡಿಸಿ, ಪ್ರಖ್ಯಾತ ನಟಿ ರೋಮಿಯನ್ನು ಮುಖ್ಯ ಪಾತ್ರದಲ್ಲಿ ಕಾಣಲು ಬಯಸಿದ್ದ.
ಜರ್ಮನ್ ಚಿತ್ರರಂಗದಲ್ಲಿ ಹೊಸ ತಲೆಮಾರಿನ ಚಿತ್ರಗಳನ್ನು ರೂಪಿಸಿ ಭವಿಷ್ಯದ ಭಾಷ್ಯ ಬರೆದ ಬೈಂಡರ್.ಅತಿ ಚಿಕಕ್ ವಯಸ್ಸಿಗೆ ಮರೆಯಾಗುತ್ತಾನೆ ಎಂದು ಯಾರು ಭಾವಿಸಿರಲಿಕ್ಕಿಲ್ಲ.ಆದರೆ ಆತನ ಚಿತ್ರಗಳು ಈಗಲೂ ನೆನಪಾಗುತ್ತವೆ...ನಮ್ಮನ್ನು ಕಾಡುತ್ತವೆ
No comments:
Post a Comment
ನಿಮಗನಿಸಿದ್ದು....