Sunday, August 8, 2010

ಅವನೆಂಬ ನಿಗೂಢವೂ... ಆತನ ಸಿನಿಮಾಗಳೆಂಬ ಗುಂಗೀ ಹುಳವೂ!




ಬಹುಶಃ ಆತನೊಬ್ಬನೇ ಇರಬೇಕು!
 45 ವರ್ಷದ ಚಿತ್ರ ಜೀವನದ ಇತಿಹಾಸದಲ್ಲಿ ಆತನ ಗಮನ ಸಸ್ಪೆನ್ಸ್ ಥ್ರಿಲ್ಲರ್‌ ಬಿಟ್ಟರೆ ಬೇರೆ ಯಾವ ಪ್ರಕಾರಗಳತ್ತಲೇ ಹರಿದಿಲ್ಲ... ಲವ್‌ಸ್ಸ್ಟೋರಿ, ಫ್ಯಾಮಿಲಿ ಸೆಂಟಿಮೆಂಟ್‌ ಯಾವುದಾದರೂ ಸರಿ ಅಲ್ಲೊಂದು ಸಸ್ಪೆನ್ಸ್ ನೀಡದಿದ್ದರೆ ಅದು ಆತನ ಮಟ್ಟಿಗೆ ಚಿತ್ರವೆ ಅಲ್ಲ....
  
 ‘ಜನರು ಚಿತ್ರ ನೋಡಬೇಕಾದರೆ ಅವರಿಗೆ ಚಿತ್ರಮಂದಿರದ ಕುರ್ಚಿಯಲ್ಲಿ ಒಂದು ನಿಮಿಷವೂ ಬಿಡದೆ ಕೂರುವಂತೆ ಮಾಡುವ ತಾಕತ್ತು ಚಿತ್ರದಲ್ಲಿ ಇರಬೇಕು. ಅದು ಸಸ್ಪೆನ್ಸ್ ಚಿತ್ರಗಳಿಂದ ಮಾತ್ರ ಸಾಧ್ಯ’ಅನ್ನುತ್ತಾನೆ,ಆಲ್‌ಫ್ರೆಡ್‌ ಹಿಚ್‌ಕಾಕ್‌
ಕೌತುಕ,ಹಾಸ್ಯ,ಕಾಮ ಈ ಮೂರು ವಿಷಯಗಳು ಅತನ ಚಿತ್ರದ ಕಥಾವಸ್ತು. 45ವರ್ಷಗಳವರೆಗೆ, 50ಕ್ಕಿಂತ ಹೆಚ್ಚು ಚಿತ್ರಕಥೆಗಳು ಈ ಮೂರು ಕಥಾವಸ್ತುವಿನ ಮೇಲೆ ಆತನ ತಲೆಯಲ್ಲಿ ಮೂಡಿದ್ದು ಆಶ್ಚರ್ಯವೇ ಸರಿ...
ಬಾಲ್ಯ
ಆಲ್‌ಫ್ರೆಡ್‌ ಜೋಸೆಫ್‌ ಹಿಚ್‌ಕಾಕ್‌..ಇದೆ ಆಗಸ್ಟ್ 13ಕ್ಕೆ ಅತನ 111ನೆ ವರ್ಷದ ಹುಟ್ಟುಹಬ್ಬ.1899 ರಲ್ಲಿ ಇಂಗ್ಲೆಂಡ್‌ನ ಲೆಯ್‌ಟಾನ್‌ಸ್ಟೀನ್‌ ಊರಿನ ಅಪ್ಪಟ ಮಧ್ಯಮ ವರ್ಗದ ಕುಟುಂಬದಲ್ಲಿ ಜನನ.ಲಂಡನ್‌ ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈಸಿದಾಗ ಅತನ ಕಣ್ಣಲ್ಲಿ ಚಿತ್ರರಂಗ ಹೊಕ್ಕುವ ಮಿಂಚು ಸುಳಿದಾಡಿತ್ತು.
 ಅದಕ್ಕಾಗಿ ಅತ ಪ್ಲೇಯರ್‌‌ ಲಾಸ್ಕಿ ಸ್ಟುಡಿಯೋದಲ್ಲಿ ಚಿತ್ರಗಳ ಟೈಟಲ್‌ ಕಾರ್ಡ್‌ ಹಾಗೂ ಮೂಕಿ ಚಿತ್ರಗಳ ಪೋಸ್ಟ್ ಪ್ರೊಡಕ್ಷನ್‌ ಕಾರ್ಯ ಮಾಡುತ್ತಾ ತನ್ನ ಚಿತ್ರ ಜೀವನ ಆರಂಭಿಸಿದ..
 ಅಲ್ಲಿ ಆತ, ಕಲಾನಿರ್ದೇಶನ,ಚಿತ್ರಕಥೆ ರಚನೆ,ಎಡಿಟಿಂಗ್‌ನ ಒಳಗೂ ಹೊರಗೂ ಅರಿತುಕೊಂಡು, 1922ರಲ್ಲಿ ಸಹಾಯಕ ನಿರ್ದೇಶಕನಾಗುತ್ತಾನೆ. ಅದೇ ವರ್ಷ ಮಿಸೆಸ್‌.ಪೀಬಾಡಿ ಚಿತ್ರ ನಿರ್ದೇಶಿಸಿದ.ಆದರೆ ಆತನ ನಿಧನದ ನಂತರವೂ ಆ ಚಿತ್ರ ಬಿಡುಗಡೆಯಾಗಲೇ ಇಲ್ಲ.ನಂತರ 1925ರಲ್ಲಿ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಮಾಡಿದ ವೊದಲ ಚಿತ್ರ ದಿ ಪ್ಲೇಶರ್‌ ರ್ಗಾಡನ್‌. ಇದು ಮೂಕಿ ಚಿತ್ರವಾಗಿತ್ತು.1929ರಲ್ಲಿ ಈತನ ವೊದಲ ವಾಕ್‌ ಚಿತ್ರ ಬ್ಲಾಕ್‌ಮೇಲ್‌ ಬಿಡುಗಡೆಯಾಗುವ ಸಮಯದಲ್ಲಿ ದೊಡ್ಡ ಪರದೆಯ ಮೇಲೆ ಚಿತ್ರ ಬರುವುದೆಂದರೆ ವಿಸ್ಮಯ ಎನ್ನುವ ಕಾಲವಾಗಿತ್ತು. ಅಂತದ್ದರಲ್ಲಿ....ಚಿತ್ರಗಳು ಮಾತನಾಡುತ್ತವೆ ಎಂದರೆ.... ದೊಡ್ಡ ಪರದೆಯ ಮೇಲೆ ತನ್ನ ಕಲ್ಪನೆಯ ಚಿತ್ರಗಳು ಮಾತನಾಡುವುದನ್ನು ನೋಡಿ ಒಂದು ಕ್ಷಣ ಆತನೇ ದಿಗ್ಬ್ರಾಂತನಾಗಿದ್ದ...
   1934ರಲ್ಲಿ ಮೆನ್‌ ವು ನೊ ಟು ಮಚ್‌ ಚಿತ್ರ ಆತನಿಗೆ ಹೆಸರು ಹಾಗೂ ಹಣ ಎರಡನ್ನು ತಂದುಕೊಟ್ಟಿತು.ಕೌಟುಂಬಿಕ ಸಂಬಂಧಗಳ ಬಗ್ಗೆ ತನಿಖೆ ನಡೆಸುವ ಸಸ್ಪೆನ್ಸ್ ಚಿತ್ರದ ಮೂಲಕ ಚಿತ್ರ ಜನರ ಬಳಿ ಸೇರಿತ್ತು....
ತನ್ನ ಕಣ್ಣಲ್ಲಿ ಅರಳುವ ಚಿತ್ರಗಳನ್ನೆ ಯಥಾವತ್ತಾಗಿ ಕ್ಯಾಮೆರಾ ಕಣ್ಣಿನಲ್ಲೂ ತೋರಿಸುವ ಚಾಕಚಕ್ಯತೆ ಆತನಲ್ಲಿತ್ತು.ಅದಕ್ಕಾಗಿಯೇ ಆತ ಯಶಸ್ವಿಯಾದ...
ದಿ 39 ಸ್ಟೆಪ್ಸ್(1935),ಸೀಕ್ರೇಟ್‌ ಎಜೆಂಟ್‌(1936)ಹೀಗೆ ಚಿತ್ರಗಳು ವರ್ಷಕ್ಕೂಂದರಂತೆ ಬರುತ್ತಿತ್ತು.ಜಮೈಕಾ ಇನ್‌(1939) ಆತನ ಕೊನೆಯ ಬ್ರಿಟಿಷ್‌ ಚಿತ್ರ...
ತಾನೂ ಕೇವಲ ಬ್ರಿಟಿಷ್‌ ಚಿತ್ರಗಳಿಗೆ ಸೀಮಿತವಾಗಬಾರದು ಎಂದುಕೊಂಡವನೇ ಡಾಪ್ನೇ ಡು ಮೋರಿಯರ್‌ಅವರ ಕಾದಂಬರಿಯನ್ನು 1940ರಲ್ಲಿ ರಿಬೆಕ್ಕಾ ಚಿತ್ರ ಮಾಡಿ ಅದರಲ್ಲಿ ಯಶಸ್ವಿಯಾದ.

   ಪ್ರಮುಖ ಚಿತ್ರಗಳು ಇಡಿ ಹಾಲಿವುಡ್‌ ಚಿತ್ರಜಗತ್ತಿನಲ್ಲಿ ಹಿಚ್‌ಕಾಕ್‌ ಚಿತ್ರಗಳೆಂದರೆ ಜನರನ್ನು ಸೆಳೆಯುವಂತೆ ಮಾಡಿದ್ದು 1941ರಲ್ಲಿ ಬಂದ ಸಸ್ಪೀಶಿಯನ್‌ ಚಿತ್ರ.ತನ್ನ ಗಂಡ ಒಬ್ಬ ಕೊಲೆಗಾರ ಎಂದು ಚಿಂತಿಸುವ ಮಹಿಳೆಯ ಕಥೆ ಆಧಾರಿತ ಚಿತ್ರವನ್ನು ಕೌಟುಂಬಿಕ ಚೌಕಟ್ಟಿನೊಳಗೆ ಅದ್ಭುತವಾಗಿ ಆತ ಚಿತ್ರಿಸಿದ್ದ.ಹಾಲಿವುಡ್‌ನಲ್ಲಿ ಹಿಚ್‌ಕಾಕ್‌ ಯುಗ ಆರಂಭವಾಗಿದ್ದು ಈ ಚಿತ್ರದ ಮೂಲಕ.
 ಆತನ ಚಿತ್ರಗಳಲ್ಲೆ ಮತ್ತೆ ಮತ್ತೆ ಮನಸ್ಸಿಗೆ ಕಾಡುವ ಚಿತ್ರ 1943ರ ಶಾಡೋ ಆಫ್‌ ಡೌಟ್‌. ಕೊಲೆಯಾದ ತನ್ನ ಅಂಕಲ್‌ನನ್ನು ಅಮೇರಿಕಾದ ಮಧ್ಯಮವರ್ಗದ ಜನರಲ್ಲಿ ಕಾಣುವ ಅಮಾಯಕ ಯುವತಿಯ ಕಥೆ ಇದರಲ್ಲಿ ಆಕೆಯ ಪಾತ್ರ ಪೋಷಣೆ ಅದ್ಭುತವಾಗಿ ದಾಖಲಾಗಿತ್ತು.
ಹಿಚ್‌ಕಾಕ್‌ನ ಪರ್ವಕಾಲ
   ಈತ ಈಗಲೂ ನೆನಪಾಗುತ್ತಾನೆ ...1950 ರಿಂದ 60ರ ಕಾಲ ಹಿಚ್‌ಕಾಕ್‌ ಚಿತ್ರಗಳ ಪರ್ವಕಾಲ. ಒಂದರ ಹಿಂದೆ ಒಂದರಂತೆ ನೆನಪಿಸಿಕೊಳ್ಳುವ,ಕಾಡುವ ಚಿತ್ರಗಳನ್ನು ಕೊಟ್ಟಿದ್ದು ಅತ ಈ ಕಾಲದಲ್ಲಿ ಐ ಕಾನ್‌ಫೆಸ್‌(1953),ಹೆಸರಲ್ಲೆ ಕ್ರಾಂತಿ ಮಾಡಿದ ಚಿತ್ರ ಡಯಲ್‌ ಎಂ ಫಾರ್‌ ಮರ್ಡ್‌ರ್‌(1954),ಟು ಕ್ಯಾಚ್‌ ಎ ಥೀಫ್‌(1955),ಮೆನ್‌ ವು ನೊ ಟು ಮಚ್‌ ಚಿತ್ರದ ರೀಮೇಕ್‌(1956),ಹಾಸ್ಯಾತ್ಮಕ ಸಸ್ಪೆನ್ಸ್ ಚಿತ್ರ ದಿ ಟ್ರಬಲ್‌ ವಿತ್‌ ಹ್ಯಾರಿ(1955),ಡಾಕೊಡ್ರಾಮಾ(1956) ಎಲ್ಲವೂ ಆತನಿಗೆ ಹೆಸರು ತಂದುಕೊಟ್ಟಿತು.
ಕೊನೆಗೆ ನಿರ್ಮಾಪಕ
ವರ್ಷಕ್ಕೆ ಒಂದು ಎರಡರಂತೆ ಹಿಚಕಾಕ್‌ ಚಿತ್ರ ಮಾಡುತ್ತಲೆ ಇದ್ದ ಅತನ 1969 ರಲ್ಲಿ ಬಿಡುಗಡೆಯಾದ ಟೋಪೆಜ್‌ ಚಿತ್ರದ ಸೋಲು ಆತನಿಗೆ ಅರಗಿಸಿಕೊಳ್ಳಲಾಗಲಿಲ್ಲ.ಕೊನೆಗೆ ಆತನೆ ಚಿತ್ರ ನಿರ್ಮಿಸುವ ನಿರ್ಧಾರಕ್ಕೆ ಬಂದು 1972ರಲ್ಲಿ ಫ್ರೇನ್‌ಜಿ ಚಿತ್ರ ಮಾಡಿದ ಅದರ ಚಿತ್ರಕಥೆ ತಯಾರಿಸಿ ಚಿತ್ರ ಬಿಡುಗಡೆಯಾಗಲು ತೆಗೆದುಕೊಂಡಿದ್ದು ಬರೋಬ್ಬರಿ ನಾಲ್ಕು ವರ್ಷ....
ಒಬ್ಬ ಅಮಾಯಕ ಮನುಷ್ಯ ಸಿರಿಯಲ್‌ ಕಿಲ್ಲರ್‌ ಆಗುವ ಕಥಾಹಂದರವಿದ್ದ ಈ ಚಿತ್ರ ಹಾಲಿವುಡ್‌ ನಲ್ಲಿ ಮತ್ತೆ ಹಿಚ್‌ಕಾಕ್‌ ಯುಗ ಮರಳಿಸಿತ್ತು.. 1976ರಲ್ಲಿ ಬಂದ ಫ್ಯಾಮಿಲಿ ಪ್ಲಾಟ್‌ ಈ ಸಸ್ಪೆನ್‌‌ಸ ಥಿಲ್ಲರ್‌ ಹರಿಕಾರನ ಕೊನೆಯ ಚಿತ್ರ...
ಕೊನೆಗಾಲ
  50ಕ್ಕಿಂತ ಹೆಚ್ಚು ತನ್ನ ಮೂರು ಕಥಾವಸ್ತುವಿನ ಹಂದರದಿಂದ ಹೊರಬೀಳದೆ ಇದ್ದರೂ, ತನ್ನ ಚಿತ್ರದಲ್ಲಿ ಎಲ್ಲೂ ಜನರಿಗೆ ಬೇಸರವಾಗದಂತೆ ಚಿತ್ರಮಂದಿರದ ಕುರ್ಚಿಯಲ್ಲಿ ಭದ್ರವಾಗಿ ಕೂರುವಂತೆ ಮಾಡುತ್ತಿದ್ದ್ದ... ಹೀಗೆ ಹೇಳುವ ಬದಲು ಆತನ ಚಿತ್ರವೆಂದರೆ ಜನ ಕುರ್ಚಿ ಬಿಟ್ಟು ಎಳುತ್ತಿರಲ್ಲಿಲ್ಲ ಎನ್ನುವುದೇ ಸಮಂಜಸವಾಗುತ್ತದೆ.ತನ್ನ ಕೊನೆಗಾಲದಲ್ಲಿ ಹೃದಯದ ತೊಂದರೆ ಹಾಗೂ ಲಿವರ್‌ ಫೇಲ್ಯೂರ್‌ ನಿಂದ ವೀಪರೀತ ಸಮಸ್ಯೆಗೊಳಗಾಗಿದ್ದ ಹಿಚ್‌ಕಾಕ್‌ ಎಂಬ ಮಹಾನ್‌ ಸಸ್ಪೆನ್ಸ್ ಥಿಲ್ಲರ್‌ ದೈತ್ಯ ಎಪ್ರಿಲ್‌ 28ರಂದು ಜಗತ್ತಿನಿಂದ ಮರೆಯಾದ.
ಕೊನೆಹನಿ
   ವಿಶ್ವ ಚಿತ್ರರಂಗದ ವೊದಲ ಚಿತ್ರ ದಿ ಗ್ರೇಟ್‌ ಟ್ರೈನ್‌ ರಾಬರಿಯಿಂದ ಇತ್ತಿಚೇಗೆ ಬಿಡುಗಡೆಯಾದ ಚೆಲುವೆಯೇ ನಿನ್ನ ನೋಡಲು...ಚಿತ್ರದವರೆಗೆ ಸಿನಿಮಾ ಸಮುದ್ರದ ಇತಿಹಾಸ ಬಹಳ ದೊಡ್ಡದು.
ಇಲ್ಲಿ ಬಂದು ಜೀವನ ಕಂಡುಕೊಂಡವರಿದ್ದಾರೆ ಹಾಗೇ ಕಳೆದುಕೊಂಡವರು ಇದ್ದಾರೆ. ಚಿತ್ರಗಳಲ್ಲಿ ಹೊಸ ಹೊಸ ಪ್ರಕಾರಗಳನ್ನು ಹುಡುಕುವ ನಿರ್ದೇಶಕರ ನಡುವೆ ಹಿಚ್‌ಕಾಕ್‌ ನಂತವರೂ ಬಲು ಅಪರೂಪವಾಗುತ್ತಾರೆ.

No comments:

Post a Comment

ನಿಮಗನಿಸಿದ್ದು....