Friday, August 27, 2010

ಶಾಂತವಾಗಿ ನೋಡಿ...ಮೌನ ಸಿನಿಮಾವಾಗಿದೆ

  ಅದು ಹಾಸ್ಯ ಸಿನಿಮಾ ಎಂದರೆ ಹೌದು; ಹಾಗೆಂದುಕೊಳ್ಳುವಂತೆಯೇ ಇದೆ! ಕಲಾತ್ಮಕ ಚಿತ್ರವೆಂದರೆ, ಅದೂ ನಿಜವೇ! ಒಂದೇ ಮಾತಿನಲ್ಲಿ ಹೇಳಿ ಮುಗಿಸುವುದಾದರೆ ವೌನವಾಗಿ ಮಾತಿಗಿಳಿಯುವ ಸುಂದರ ಚಿತ್ರ. ಇರಾನ್ ಕೊರ್ಲಿನ್ ತನ್ನ ಜೀವನದ ಕೆಲವು ಅಂಶಗಳನ್ನಿಟ್ಟುಕೊಂಡೇ ಸುಂದರ ಚಿತ್ರವೊಂದನ್ನು ಹೆಣೆದಿದ್ದಾನೆ. ಒಂದರ್ಥದಲ್ಲಿ 75% ರೀಯಲ್ 25% ರೀಲ್ ಅನ್ನಿಸುವ ‘ದಿ ಬ್ಯಾಂಡ್  ವಿಸಿಟ್ ಚಿತ್ರ
 ಎಣಿಕೆಯಂತೆ ಇದು ಯಾರೆಂದರೆ ಯಾರ ನಿರಿಕ್ಷೇಯನ್ನೂ ಹುಸಿಗೊಳಿಸದ ಚಿತ್ರ. ಮಾತನ್ನೇ ಬಂಡವಾಳ ಮಾಡಿಕೊಂಡ ಇಂದಿನ ಸಿನಿಮಾಗಳ ನಡುವೆ ಈ ಚಿತ್ರ ತುಂಬಾ ವಿಭಿನ್ನ. ಹೆಸರೇ ಹೇಳುವಂತೆ ಒಂದು ಬ್ಯಾಂಡ್ ಸೆಟ್  ಹುಡುಗರು ಬೇರೆ ಪ್ರದೇಶಕ್ಕೆ ಹೋಗಿ ಅಲೆಮಾರಿಯಾಗಿ ಬದುಕನ್ನು ಕಂಡುಕೊಳ್ಳುವ ಚಿತ್ರ. ಸಾಮಾಜಿಕವಾಗಿ ಇವತ್ತಿಗೂ ಇಂಥ ಸ್ಥಿತಿಯನ್ನು ಅನುಭವಿಸುತ್ತಿರುವವರು ಹತ್ತಿರದಿಂದ ಕಾಣಸಿಗುತ್ತಾರಾದ್ದರಿಂದ ಆವತ್ತಿನ ಬದುಕಿಗೂ ಇವತ್ತಿನ ಜೀವನ ಉಪಕ್ರಮಗಳಿಗೂ ಇರುವ ಸಾಮ್ಯತೆಯನ್ನು ಬಿಚ್ಚಿಡುತ್ತದೆ,ಆಪ್ತವಾಗುತ್ತದೆ.
        2007ರಲ್ಲಿ ತರೆಗೆ ಬಂದ ಇಸ್ರೇಲ್ ಚಿತ್ರ ದಿ ಬ್ಯಾಂಡ್ ವಿಸಿಟ್  ಇರಾನ್ ಕೊರ್ಲಿನ್ ಎಂಬ ನಿರ್ದೇಶಕನ ಚೊಚ್ಚಲ ಪ್ರಯತ್ನ. ಚಿತ್ರದ ನಾಯಕ ಹಾಗೂ ಆತನ ಮಗ ಎರಡು ಪ್ರತ್ಯೇಕ ತಲೆಮಾರುಗಳ ಪ್ರತಿನಿಧಿಗಳಂತೆ ಕಾಣುತ್ತಾರೆ. ಇಬ್ಬರ ವಿಚಾರಗಳಲ್ಲೂ ವ್ಯಕ್ತವಾಗುವ ಭಿನ್ನತೆಗಳು ಬದಲಾದ ಸಾಮಾಜಿಕ ಸ್ವರೂಪವನ್ನು ಬಿಂಭಿಸುತ್ತಾ ಮುಂದುವರೆಯುತ್ತದೆ. 2007 ನೇ ಸಾಲಿನಲ್ಲಿ ಇಸ್ರೇಲ್ನಿಂದ ಆಸ್ಕರನ ಅತ್ಯತ್ತಮ ವಿದೇಶಿ ಚಿತ್ರ ವಿಭಾಗಕ್ಕೆ ಸ್ಪಧಸಿತ್ತು. ಅದೃಷ್ಟ ನೆಟ್ಟಗಿರಲಿಲ್ಲ. ಪ್ರಶಸ್ತಿ ಕೈ ತಪ್ಪಿ ಹೋಯಿತು.
ಕಥೆ ಸಾಗುವುದು ಹೀಗೆ...
  ಈಜಿಪ್ತ್ ನ ಅಲೆಗ್ಸಾಂಡ್ರಿಯಾ ಸೆರಮೋನಿಯಲ್ ಪೋಲಿಸ್ ಆರ್ಕೆಷ್ಟ್ರಾ ಎಂಟು ಮಂದಿಯನ್ನೂಳಗೊಂಡ ಬ್ಯಾಂಡ್ ಸೆಟ್ ತಂಡ. ಇವರಿಗೆ ಇಸ್ರೇಲ್ ನ  ಅರಬ್ ಇಂಟರ ನ್ಯಾಷನಲ್ ಸೆಂಟರ್ ನಿಂದ ಕಾರ್ಯಕ್ರಮ ನಡೆಸಿಕೊಡಲು ಆಹ್ವಾನ ಬರುತ್ತದೆ. ಅಂದುಕೊಂಡಂತೆ ಎಲ್ಲವೂ ಆಗದು ಎಂಬ ಸಂಗತಿಯನ್ನು ಪರೋಕ್ಷವಾಗಿ ಹೇಳಲು ಬಳಸಿಕೊಂಡ ರೂಪಕದಂತೆ ಇವರು ವಿಳಾಸ ತಪ್ಪಿ ಬೇರೆ ಪ್ರದೇಶಕ್ಕೆ ಬಂದಿಳಿಯುತ್ತಾರೆ. ಅಷ್ಟಷ್ಟೇ ಬದುಕಿನ ಅರ್ಥ ಕಂಡುಕೊಳ್ಳುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಆರ್ಕೆಷ್ಟ್ರಾ ದ ನಾಯಕ ತೌಫೀಕ್ ನ ಬದುಕಿಗೆ ಇಲ್ಲಿ ವಿಚಿತ್ರ ತಿರುವು. ಯಾವುದೇ ಗುರುತು ಪರಿಚಯವಿಲ್ಲದ ಪ್ರದೇಶದಲ್ಲಿ ಹೊಸ ದಿಕ್ಕನ್ನು ಹಿಡಿಯುತ್ತಾನೆ.ಆದರೆ ಸ್ವಗತದಲ್ಲಿ ತನ್ನ ಮಗನ ಬಗ್ಗೆ ತಾನು ನಿಷ್ಠುರ ಧೋರಣೆ ತಾಳಿದ್ದೇ ತನ್ನ ಹೆಂಡತಿಯ ಸಾವಿಗೆ ಕಾರಣವಾಯಿತು ಎಂಬ ದುಃಖ. ಆತನನ್ನು ಖಿನ್ನತೆ ಆವರಿಸುತ್ತದೆ. ಈ ಬಗ್ಗೆ ಆತನಲ್ಲಿ ಜಿಗುಪ್ಸೆ ಇದೆ.ಇದರಿಂದ ಹೊರ ಬರುವ ಸಲುವಾಗಿಯೇ ಬ್ಯಾಂಡ್ ತಂಡ ಬೇಕು... ಆ ಸದ್ದಿನಲ್ಲಿ ಮನಸಿನೊಳಗಿನ ಗದ್ದಲ ಸುಮ್ಮನೇ ಅಳಿಸಿ ಹೋಗಬೇಕು...
   ಅನಾಮಿಕ ಪ್ರದೇಶದ ರೆಸ್ಟೋರೆಂಟ್ನಲ್ಲಿ ಉಳಿದುಕೊಳ್ಳುವ ಈ ತಂಡಕ್ಕೆ ಅಲ್ಲಿ ರೆಸ್ಟೋರೆಂಟ್ ಮಾಲಕಿ ಡೈನಾ ಜೊತೆಯಾಗುತ್ತಾಳೆ ಬಿಟ್ಟು ಹೋದ ಪ್ರಿಯತಮನ ಬಳಿಕ ಆಕೆಯ ಬದುಕಿಗೂ ನೆರಳಿಲ್ಲ. ಒಂದರ್ಥದಲ್ಲಿ ಬರೀ ಬರಡು ಬದುಕು ಬಾಳುತ್ತಿದ್ಗದಾಳೆ .ಇವರಿಬ್ಬರ ಬದುಕು ಚರಂಡಿ ಪಕ್ಕದ ಗೋಡೆ.


 ಡೈನಾ ಜೊತೆ ಸುಂದರ ಸಂಜೆಯಲ್ಲಿ ನಡೆಯುವ ಮಧುರ ಮಾತುಕತೆಯಿಂದ ತನ್ನ ಮಗ ಅರ್ಥವಾಗುತ್ತಾನೆ..ತೌಫೀಕ್ ಗೆ 80ರ ದಶಕದ ದಿನ ಮರುಕಳಿಸಬೇಕು ಎಂಬ ಆಸೆ..ಆದರೆ ಆತನ ಮಗ ಹೊಸ ತಲೆಮಾರಿನ ಪ್ರತಿನಿಧಿ.ಇವರಿಬ್ಬರಿಗೆ ಕೊಂಡಿಯಾಗುವವಳು ಡೈನಾ.
 ತನ್ನೋಳಗಿನ ತಾನನ್ನು ಅಡಗಿಸಿಟ್ಟ ತೌಫೀಕ್ ಅದನ್ನು ಹೊರಜಗತ್ತಿಗೆ ತೋರಿಸುವುದೇ ಚಿತ್ರದ ಒನ್ ಲೈನ್ ಕಥೆ.ಇದೆ ಈ ಚಿತ್ರದ ಪರಿಣಾಮಕಾರಿ ಅಂಶ ಇದರ ನಡುವೆ ನಡೆಯುವ ಜಂಜಾಟಗಳನ್ನು ಇರಾನ್ ಮನೋಜ್ಞವಾಗಿ ಚಿತ್ರಿಸಿದ್ದಾನೆ. 2007ರಲ್ಲಿ ಹೆಚ್ಚಿನ ಅಂತಾರಾಷ್ಟ್ರಿಯ ಪ್ರಶಸ್ತಿಗಳಿಸಿದ ಈ ಚಿತ್ರದ ಕಥೆ ಹೆಚ್ಚಿನ ಜನರ ಜೀವನದಲ್ಲಿ ಸಂಭವಿಸುವಂತದ್ದು ‘!.ಚಿಕ್ಕಪುಟ್ಟ ವಿಷಯಗಳಿಗೆ ಯಡವಟ್ಟುಗಳಾಗುವ ಬದುಕಿನ ಸುಂದರ ವಿಡಂಬನೆ ಚಿತ್ರದಲ್ಲಿದೆ.
ನನಗೇಕೋ ವಿಶೇಷ ವ್ಯಕ್ತಿ ಅನಿಸಿದ..


ಚಿತ್ರ ನೋಡಿದೆ, ಕಾಡುವ ಚಿತ್ರಗಳೆಂದರೆ ಒಂದು ಪಟ್ಟು ಹೆಚ್ಚಿಗೆ ಖುಷಿಯಾಗುತ್ತದೆ.ತೌಫೀಕ್ ನ ಪಾತ್ರ ಕಾಡುತ್ತಿತ್ತು ಇರಾನ್ ನೆನಪಾಗುತ್ತಿದ್ದ..
ಇಂತದ್ದೂಂದು ಅಂತರ್ಗತ ಕಥೆ ನಿರ್ದೇಶಕನಿಗೆ ಹೊಳೆದಿದ್ದಾದರೂ ಹೇಗೆ ಎನ್ನುವ ಕುತೂಹಲ ಕಾಡುತ್ತಿತ್ತು. ಇಂಟರನೆಟ್ ನ ಕಿಂಡಿಯಲ್ಲಿ ಇರಾನ್ ಎಂದು ಬರೆದಾಗ ಸಿಕ್ಕಿದ್ದಿಷ್ಟು..
  ಇಸ್ರೇಲ್ನ ಟಿವಿಗಳಲ್ಲಿ ಬರುತ್ತಿದ್ದ ಸಾಂಪ್ರದಾಯಿಕ ಆರ್ಕೆಷ್ಟ್ರಾ ಗಳು ಟಿವಿಗಳ ಖಾಸಗೀಕರಣದಿಂದ ಮರೆಯಾದವು. ಒಂದು ಕಾಲದಲ್ಲಿ ಇಡಿ ಇಸ್ರೇಲ್ ಜನತೆಯನ್ನು ಹಿಡಿದಿಟ್ಟಿದ್ದ ಆ ಕಾರ್ಯಕ್ರಮ ಟಿವಿ ಚಾನೆಲ್ಗಳಲ್ಲಿ ಬರುವ ಆಧುನಿಕ ಕಾರ್ಯಕ್ರಮದ ನಡುವೆ ಮರೆಯಾದವು.ಇದೆ ಕಥೆಗೆ ನನ್ನ ಜೀವನದ ಕೆಲವು ಘಟನೆಗಳನ್ನು ಸೇರಿಸಿ ಈ ಚಿತ್ರ ಮಾಡಿದ್ದೆನೆ ಎನ್ನುತ್ತಾನೆ.
 ನಿರ್ಜನ ಪ್ರದೇಶಗಳನ್ನು ನಿರ್ಲಜ್ಜವಾಗಿ ಕಾಮೆರಾದಲ್ಲಿ ಸರೆಹಿಡಿದ ರೀತಿಯಂತೂ ಅದ್ಬುತ.ಬರಡು ಬದುಕಿಗೆ ಮಾದರಿ ಎಂಬಂತೆ ತೋರಿಸಿರುವ ಪ್ರತಿಮೆಗಳು...ಒಂದಕ್ಕಿಂತ ಒಂದು ದೃಶ್ಯ ವೈಭವ ಚಿತ್ರವನ್ನುನ್ನು ಸುಂದರವಾಗಿಸಿದೆ. ಸುತ್ತಲೂ ಕತ್ತಲೆ..ಬೋಳು ಬೆಂಚು...ತಲೆ ಮೇಲೆ ಮಂದಬೆಳಕಿನ ಟ್ಯೂಬ್ ಲ್ಐಟು..ತೌಫೀಕ್  ಹಾಗೂ ಡೈನಾ ಮಾತಾಡುವಾಗ ಕ್ಯಾಮೆರಾ ಕಲೆಗಾರಿಕೆ ನಮ್ಮನ್ನು ಮಂತ್ರ ಮುಗ್ದರನ್ನಾಗಿಸುತ್ತದೆ.
ಕೊನೆ ಕಾಲಂ
 ಪ್ರಪಂಚದಲ್ಲಿ ಹಲವು ಚಿತ್ರಗಳಿವೆ.ನೋಡಿದಾಗ ತಣಿಸುವ..ಇಲ್ಲದಿದ್ದಲ್ಲಿ ಕುಣಿಸುವ..ಚಿತ್ರಗಳ ನಡುವೆ.ಕಾಡುತ್ತದೆ..ದಿ ಬ್ಯಾಂಡ್ ವಿಸಿಟ್..ಇದರ ಡಿವಿಡಿ ಹುಡುಕಿಕೊಂಡು ಚಿತ್ರ ನೋಡಿ,ಮನಸ್ಸು ಹಗುರಾಗುತ್ತದೆ..ಜೀವನದಲ್ಲಿ ಕಳೆದುಕೊಂಡದ್ದು ಸಿಗುತ್ತದೆ. ಈಗೀಗ ಕಾಡುವ ಚಿತ್ರಗಳು ಬರುವುದು ತುಂಬಾ ಕಡಿಮೆ.

No comments:

Post a Comment

ನಿಮಗನಿಸಿದ್ದು....