Sunday, August 22, 2010

ಲೈಫು ಇಷ್ಟೆನೆ....ದರಿದ್ರ ನನ್ ಮಗಂದು...



ಒಂದೊಂದ್ ಸಾರಿ ಆ ಆಸಾಮಿನ ನೋಡಿದ್ರೆ ಯಡವಟ್ಟು ರೀತಿ ಕಾಣ್ತಾನೆ, ಇನ್ನೋಂದು ಸಾರಿ ಜೇವನದ ಬಗ್ಗೆ ತೀರಾ ಅನುಭವ ಇದ್ದವನ ತರ ಕಾಣುತ್ತಾನೆ,ಮಗದೊಂದು ಸಾರಿ ಆತ ನನಗೆ ಆಧುನಿಕ ತತ್ವ ಜ್ಞಾನಿ ರೀತಿ ಕಾಣಿಸಿದ್ದಾನೆ...ಯೋಗರಾಜ್ ಭಟ್
ಮಣಿ, ರಂಗ ಎಸ್ ಎಸ್ ಎಲ್ ಸಿ, ಮುಂಗಾರು ಮಳೆ, ಗಾಳಿಪಟ, ಮನಸಾರೆ ಈ ಎಲ್ಲಾ ಚಿತ್ರ ಇಷ್ಟವಾಗಿದೆ...ಗಾಳಿಪಟ ಚಿತ್ರವೊಂದನ್ನೆ ಹನ್ನೊಂದು ಬಾರಿ ನೋಡಿದ್ದೆನೆ....ಅದಕ್ಕೆ ಕಾರಣವು ಇಲ್ಲದಿಲ್ಲ.." ಒಂದೆ ಸಮನೆ ನಿಟ್ಟುಸಿರು ", ಕವಿತೆ ಕವಿತೆ ನಿನೇಕೆ ಪದಗಳಲಿ ಅವಿತೆ "  ಗೀತೆ ಮನಸ್ಸಿಗೆ ಬಹುವಾಗಿ ಕಾಡಿತ್ತು...ಒಂದೆ ಸಮನೆ...ಹಾಡು ಕೇಳಿ ಯೋಗರಾಜ್ ಭಟ್ ಎಂಬ ಪದಬ್ರಹ್ಮ ಸಿಕ್ಕಾಗ ಉದ್ಧಂಡ ಮನಸ್ಕಾರ ಹಾಕಬೆಕು ಅಂತಿದ್ದೆ...ಅಷ್ಟರಲ್ಲಿ ಜಂಗ್ಲಿಯ ಹಳೆ ಪಾತ್ರೆ ಹಳೆ ಕಬ್ಣ ಎಂದು ಭಟ್ಟರು ಬರೆದಾಗ ಈ ಪುಣ್ಯಾತ್ಮ ಈ ರೀತಿಯಲ್ಲೂ ಹಾಡು ಬರೆಯುತ್ತಾರ ಎನ್ನುವ ಹಾಗೆ ಅಯ್ತು... ಹೊಸ ಗಾನ ಬಜಾನ ಇದೆ ರೀತಿಯ ಒಟ್ರಾಶಿ ಹಾಡು... ಆದರೂ ಕನ್ನಡ ಗೀತೆ ಗಳಲ್ಲಿ ವಿಚಿತ್ರ ಹೊಸತನ ರೂಪಿಸಿದರು.
ಕನ್ನಡಕ್ಕೆ ಕಾಡುವಂತ, ಕೂಡುವಂತ, ಕುಣಿಯುವಂತ ಗೀತೆ ಕೂಟ್ಟ ಭಟ್ಟರು ಮತ್ತೆ ಬಂದಿದ್ದಾರೆ....ಈಗ ಮತ್ತದೆ ವಿಚಿತ್ರ ಗೀತೆಗಳ ಗುಚ್ಚದೊಂದಿಗೆ ಬದ್ದಿದ್ದಾರೆ....ಪಂಚರಂಗಿ....ಲೈಫು ಇಷ್ಟೆನೆ..
ಯೋಗರಾಜ್ ಮೆಷ್ಟ್ರು ಪಾಠ ತೆರೆ ಮೇಲೆ ಬರಲು ತುಂಬಾ ದಿನ ಇದೆ ಆದರೆ ಹಾಡುಗಳು ಬಿಡುಗಡೆ ಆಗಿವೆ...ಚಿತ್ರದ ಮೂರು ಹಾಡುಗಳಲ್ಲಿ ಭಟ್ಟರು ಲೈಫುನ ಬಗ್ಗೆ ಪ್ರವಚನ ನಿಡಿದ್ದಾರೆ....ಆದರೆ ಅದು ಬದುಕಿನ ಕಠೋರ ಸತ್ಯ ಎನ್ನುವುದು ಕೇಳಿದವರಿಗೆ ತಿಳಿಯುತ್ತದೆ....ನಮ್ಮ ಲೈಫು ಹೀಗೆ ಇರಬೇಕು ಹಾಗೇ ಇರಬೆಕು ಎಂದು ಬೆಟ್ಟದಷ್ಟು ಕಲ್ಪನೆಗಳು ನಮ್ಮ ಮನದಲ್ಲಿರುತ್ತದೆ...ಒಳ್ಳೆ ಎರಿಯಾದಲ್ಲಿ, ಕಡಿಮೆ ರೇಟಿನ ಸ್ಯಟು ತೊಗೊಂಡು. ಬಿಳಿ ಹೆಂಡ್ತಿನ ಮದುವೆ ಆದಾಗ ಬದುಕು ರೇಸಿಗೆ ಬಿದ್ದಿರುತ್ತದೆ...ಅದಕ್ಕೆ ಭಟ್ಟರು ಬರೆದ ಹಾಡು ವಂಡರ್ ಫುಲ್...

ಬದುಕು ನೀನು ವಾಸ್ತು ಪ್ರಕಾರ
ಕುಬೇರ ಮೊಲೆ ಮಾತ್ರ ಕಟ್ಸು
ಟಾಯ್ಲೆಟ್ ಒಳಗೆ ಹೊಗಿ ಮಲ್ಕೊ..
ಲೈಫು ಇಷ್ಟೆನೆ...ಪಂಚರಂಗಿ ಪೊಂಯ್..ಪೊಂಯ್

ಜೀವನದಲ್ಲಿ ಹೆಚ್ಚಿನವರು ಬದುಕುವುದು...ತಮ್ಮ ಫ್ಯಾಮಿಲಿಗಾಗಿ...ಅದರೆ ಇಡಿ ಜೀವನ ಹೆಂಡ್ತಿ ಮಕ್ಕಳು...ಅಂದು ಪ್ರತಿದಿನ ಸಾಯೋದೆ ಆಗಿದೆ ಅಂದ್ರೆ...

ಭೂಮಿ ಮೇಲೆ ದೇವರು ಬಿಟ್ಟ
ಮದ್ವೆ ಆಗಿ ಗಂಡ ಕೆಟ್ಟ
ಮ್ಯಾಚಿಂಗ್ ಬ್ಲೌಸ್ ಗೆ ಟಯಲರ್ ಸತ್ತ
ಲೈಫು ಇಷ್ಟೆನೆ...ಪಂಚರಂಗಿ ಪೊಂಯ್..ಪೊಂಯ್

ಎಲ್ಲರು ಹಾಗೆ ಇಗಿರುವ ಸುಂದರ ಜೀವನವನ್ನು ಬಿಟ್ಟು ಮುಂದಿನ ಜನ್ಮದ ಬಗ್ಗೆ ಕನಸು ಕಾಣುತ್ತಾರೆ ಇದಕ್ಕೆ ಭಟ್ಟರ ವ್ಯಂಗ್ಯ ಹೇಗೆ ಗೊತ್ತಾ....

ಹಿಂದಿನ ಜನ್ಮದ ರಹಸ್ಯ ತಿಳ್ಕೋ
ಮುಂದಿನ ಜನ್ಮದ ಭವಿಷ್ಯ ತಿಳ್ಕೊ
ಈಗಿನ ಜನ್ಮ ಹಾಳಾಗ್ ಹೋಗ್ಲಿ
ಒಳ್ಳೆಲೈಫುನ ಎಂಜಾಯ್ ಮಾಡ್ತಿರೊರ್ನ ನೊಡಿ ಆ ನನ್ಮಗ ಛಾನ್ಸ್ ಹೊಡ್ದ  ಅಂತಿವಿ ಅಲ್ಲಿ ಸದ್ದಿಲ್ಲದೆ ನಮ್ಮ ಕಲರಫುಲ್ ಜೀವನ ಮಕಾಡೆ ಬಿದ್ದರಿರುತ್ತದೆ..ಇಲ್ಲಿ ನುರೆಂಟು ಬಣ್ಣಗಳಿದ್ದರು ಬ್ಲಾಕ್ ಎಂಡ್ ವೈಟು ಜೀವನ ಮಾಡ್ತೀವಿ.
ನೀರಿನ ಮೇಲೆ ಗುಳ್ಳೆ ಉಂಟು
ಬಾಳಿನ ಬಣ್ಣ ನೂರಾಎಂಟು
ನಮ್ದೆನಿದ್ರು ಬ್ಲಾಕ್ ಎಂಡ್ ವೈಟು..
ಲೈಫು ಇಷ್ಟೆನೆ...ಪಂಚರಂಗಿ ಪೊಂಯ್..ಪೊಂಯ್




ಆದುನಿಕ ತಂತ್ರಜ್ಞಾನ ಎಷ್ಟರ ಮಟ್ಟಿಗೆ ವಿಪರಿತ ಹೊಗಿದೆ ಗೊತ್ತಾ...ಈ ನಾವು ಎಲ್ಲದಕ್ಕೂ ಗೂಗಲ್, ಯಾಹೂ ಅಂತಾನೆ ಇರ್ತಿವಿ..ನಮಗೆ ಇಂಟರನೆಟ್ ಇಲ್ಲದಿದ್ರೆ ಎನೂ ಕೆಲಸ ಆಗುವುದುಇಲ್ಲ ಹಾಗಾದ್ರೆ ಬೆಡ್ರೂಮ್ನಲ್ಲಿ ಹೆಗ್ಗಣ ಬಂದ್ರೆ
ಭಟ್ಟರ ಪದ ಒದಿ...
ವಿಷಯಾ ಎನಪ್ಪಾ ಅಂದ್ರೆ
ಬೆಡ್ರೂಮ್ನಲ್ಲಿ ಹೆಗ್ಗಣ ಬಂದ್ರೆ
ಇಂಟರನೆಟ್ನಲ್ಲಿ ದೊಣ್ಣೆ ಹುಡುಕೂ
ಲೈಫು ಇಷ್ಟೆನೆ...ಪಂಚರಂಗಿ ಪೊಂಯ್..ಪೊಂಯ್

ಪಂಚರಂಗಿ ಅಂದ್ರೆ...
ಲೈಫುನ ಬಗ್ಗೆ ತತ್ವಾ ಉಲ್ಟಾ..
ಬದುಕಿನ ಬಗ್ಗೆ ಹೆಳೋದ್ ಕಷ್ಟ..
ಆದರೂ ಹಿಗೆ ಬದುಕು ಅನ್ನೋ ಮಾತು ಸತ್ಯ...

 ಬದುಕನ್ನು ಬೆತ್ತಲೆ ಮಾಡುವ....ಇಂತಹ ಎಷ್ಟೋ ವಿಚಾರಗಳು ನಮ್ಮ ನಡುವೆ ಇದೆ
ಬದುಕು ಬರಿ ಮೆಣಸಿನ ಬೋಂಡಾ....ಏನು ಇಲ್ಲ ಎನ್ನುವ ಭಟ್ಟರು ಇನ್ನಂದು ಕಡೆ....ಹೊಸ ಪಾಪುಗೊಂದು ಹೆಸರು ಇಡೋಣ ಅಂತಾರೆ..

No comments:

Post a Comment

ನಿಮಗನಿಸಿದ್ದು....