Saturday, December 12, 2009

ತುಳು ಸಮ್ಮೇಳನದಲ್ಲಿ ಮಿನುಗಿದ "ನೇಸರ"



"ಪತ್ರಿಕೋದ್ಯಮ ಒಂದು ಅವಸರದ ಸಾಹಿತ್ಯ" ವೆನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಲ್ಲಿ ಎನೇ ಆಗಲಿ ಅವಸರದಲ್ಲಿಯೇ ನಡೆಯಬೇಕು ಅಂದರೆ ಮಾತ್ರ ಯಶಸ್ಸು ಸಾಧ್ಯ. ಹಾಗೆಯೆ ವಿಶ್ವ ತುಳು ಸಮ್ಮೇಳನದಲ್ಲಿ ಎಲ್ಲಾ ಪತ್ರಿಕಾಮಿತ್ರರು ತಮ್ಮ-ತಮ್ಮ ಪತ್ರಿಕೆಗೆ ಸುದ್ದಿ ನೀಡುವ ಬ್ಯುಸಿಯಲ್ಲಿದ್ದರೆ.. ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳು ಅವರಿಗಿಂತ ನಾವೇನು ಕಮ್ಮಿ.ಎಂದುಕೊಂಡು ಅವಸರದಲ್ಲೇ ಬಿಡುಗಡೆ ಮಾಡಿದ ನೇಸರ ಪತ್ರಿಕೆ ಬಗ್ಗೆ ಚಿಕ್ಕ ಲೇಖನ.....
"ನೇಸರ-ನವ್ಯ ಜ್ಞಾನದ ಹರಿಕಾರ" ಎಂಬ ಅಡಿಬರಹದೊಂದಿಗೆ ಕಳೆದ ವರ್ಷದಿಂದ ಹೊರಬರುತ್ತಿರುವ ನಾಲ್ಕು ಪುಟದ ಪ್ರಾಯೋಗಿಕ ಪತ್ರಿಕೆ ಇದು. ಸಂಪೂರ್ಣವಾಗಿ ವಿದ್ಯಾರ್ಥಿಗಳೆ ನಿರ್ವಹಿಸುತ್ತಿರುವ ಈ ಪತ್ರಿಕೆಯ ಖರ್ಚು- ವೆಚ್ಚ ವೆಲ್ಲ ಅವರದೆ ಎಂದರೆ ಆಶ್ಚರ್ಯವಾಗದೆ ಇರದು. ಪ್ರತಿ ವಿಶೇಷ ಸಂರ್ಧಭ ಗಳ ಸಮಯದಲ್ಲಿ ವಿಶೇಷ ಸಂಚಿಕೆ ಹೊರತರುತ್ತಾರೆ, ಒಂದೊಂದು ಸಂಚಿಕೆಗೂ ಅದರ ಸಂಪಾದಕರು ಬೇರೆ-ಬೇರೆ.ಸಂಪಾದಕ ಮಂಡಳಿಯಲ್ಲಿರುವ ಎಲ್ಲಾ ಸದಸ್ಯರು ಸಂಪಾದಕ ಎನ್ನುವ ಪಟ್ಟವೆರುತ್ತಾರೆ.
ಉಜಿರೆಯಲ್ಲಿ ನಡೆಯುತ್ತಿರುವ ವಿಶ್ವ ತುಳು ಸಮ್ಮೇಳನದ ವಿಷಯವನ್ನಾಗಿಸಿಕೊಂಡು ಹೊರಬಂದಿರುವ ನೇಸರದ ವಿಶೇಷ ಸಂಚಿಕೆ ಆ ವಿದ್ಯಾರ್ಥಿಗಳ ಪತ್ರಿಕೋದ್ಯಮ ಆಸಕ್ತಿಗೆ ಸಾಕ್ಷಿ.ಇದನು ಉದಯವಾಣಿಯಲ್ಲಿ ಪತ್ರಕರ್ತರಾಗಿ ಬಹುದೊಡ್ಡ ಹೆಸರು ಗಳಿಸಿರುವ ಮನೋಹರ ಪ್ರಸಾದ್ ಬಿಡುಗಡೆಗೊಳಿಸಿದರು. ಇಡಿ ಪತ್ರಕರ್ತ ಸಮೂಹವೆ ಅಲ್ಲಿ ನೆರೆದಿತ್ತು. ಇದರ ಸಂಪೂರ್ಣ ನೇತೃತ್ವ ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿ ಗಳದ್ದು.. ಒಟ್ಟಾರೆ ಯಾಗಿ ವಿಶ್ವ ತುಳು ಸಮ್ಮೇಳನದಲ್ಲಿ ಮಿನುಗಿತು. ಎಸ್.ಡಿ.ಎಂ ಕಾಲೇಜಿನ "ನೇಸರ"

Friday, December 11, 2009

ವಿತಂಡ ....ವಾದ ಕಂದಕ ....


ಹಾಗೆನಿಸುವ ಮೊದಲೆನೆ ಅಲ್ಲೊಂದು ಕಂದಕ ಸೃಷ್ಟಿಯಾಗಿತ್ತು. ಅದು ಎರಡು ಸಂಸಾರಗಳ ನಡುವಿನ ಕಂದಕವಾಗಿರಲಿಲ್ಲ. ಬದಲಾಗಿ ಅದೊಂದು ರೀತಿಯಲ್ಲಿ ದಂಗೆಯನ್ನೆಬ್ಬಿಸುವಂತಹ ಜನಾಂಗಗಳ ನಡುವಿನ ಕಂದಕವಾಗಿತ್ತು.
ಅಲ್ಲಿ ಏನು ನಡೆಯಬಾರದೋ ಅದು ನಡೆದು ಹೋಗಿತ್ತು. ಅದನ್ನು ಯಾರು ಮಾಡಬಾರದಿತ್ತೋ ಅವರೇ ಮುಂದೆ ಬಿದ್ದು ಬಲು ಆಸ್ಥೆಯಿಂದ ಮಾಡಿದ್ದರು. ಹೀಗೆ ಪರಿಸ್ಥಿತಿ ಕೈ ಮೀರಿ ಹೋಗಿರುವಾಗ ಜನಸಾಮಾನ್ಯರ ಒಳ್ಳೆಯ ಮನಸ್ಸು ಕುದ್ದು ಹೋಗಿತ್ತು.
ಅಲ್ಲಿಯೂ ಅಷ್ಟೇ ಆ ಇತಿಹಾಸದಲ್ಲೂ ಇಂಥಹ ಅನೇಕ ನಡೆಬಾರದ ಘಟನೆಗಳು ಆಗಬಾರದವರ ಕೈಯಲ್ಲಿ ಆಗಿ ಹೋಗಿದ್ದವು.
ಇತಿಹಾಸ ಮರುಕಳಿಸುತ್ತದೆ ಅಂತಾರಲ್ಲ ಅದು ಸತ್ಯ. ಅದೇ ಇಲ್ಲಿ ಪುನರಪಿ ನಡೆದು ಹೋಗಿದ್ದು.

Thursday, December 10, 2009

ಬೇಕು ಇಂತದ್ದೊಂದು ಸಮ್ಮೇಳನ ನಾಡು-ನುಡಿಯ ರಕ್ಷಣೆಗೆ...

ಇನ್ನು ಹೆಚ್ಚೇನು ದಿನಗಳಿಲ್ಲ. ನಮ್ಮ ನಾಡು-ನುಡಿ ರಕ್ಷಣೆಗಾಗಿ ನಾವುಗಳು ಮುಂದೆ ತುಂಬಾ ಕಷ್ಟಪಡಬೇಕು. ಅತ್ತ ಬೆಳಗಾವಿ ಮಹರಾಷ್ಟ್ರಕ್ಕೆ ಇನ್ನು ಕೆಲವೆ ದಿನಗಳಲ್ಲಿ ಸೇರಬಹುದು. ಕಾಸರಗೋಡುನ್ನು ಕೇರಳದವರು ಬೇಕೆಂದು ಬಡಿದುಕೊಳ್ಳತ್ತಿದ್ದಾರೆ.ತಮಿಳುನಾಡು ಮತ್ತು ಆಂಧ್ರಪ್ರದೇಶದ್ದು ಇದೆ ಕತೆ. ಇಂಥ ಸಂದರ್ಭ ದಲ್ಲಿ ನಡೆಸುವ ಸಾಹಿತ್ಯಸಮ್ಮೇಳನಗಳು ಬರಿ ಗಲಾಟೆ ಕೇಂದ್ರ ಗಳಾಗಿವೆ. ಈ ಸಂದರ್ಭದಲ್ಲಿ ಕನ್ನಡಿಗರ ಮನ ಗೆದ್ದು ಆರು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವ ಆಳ್ವಾಸ್ ನುಡಿಸಿರಿ ಬಗ್ಗೆ ವಿಶೇಷ ಲೇಖನ.
೨೦೦೯ ರ ನುಡಿಸಿರಿಯನ್ನು ಉದ್ಘಾಟಿಸಿದವರು ಸಾಹಿತಿ. ಚಿಂತಕ ಹಂ,ಪ,ನಾಗರಜಯ್ಯ ಇವರು ಮಾತನಾಡಿ ವ್ಯಕ್ತಿಗಳಿಗೆ ಮುಪ್ಪು ಮರೆವು ಮರಣ ವಿದ್ದರೂ ಕನ್ನಡಕ್ಕಿಲ್ಲ.ಅದರ ಅಗಾಧ ಶಕ್ತಿಯ ಬೇರಿಗೆ ಎಲ್ಲರೂ ನೀರುಣಿಸಿದ ಕಾರಣ ಕನ್ನಡ ಸರ್ವ ಜನಾಂಗದ ಆಸ್ತಿ. ಹೀಗೆ ಕನ್ನಡಕ್ಕೆ ಜನರ ,ಸಾಹಿತಿಗಳ, ವಿಮರ್ಶಕರ ಕೊಡುಗೆಗಳಿಂದ ಈ ಭಾಷೆ ಈ ಮಟ್ಟಕ್ಕೆ ಬೆಳದಿದೆ. ನಿಜಕ್ಕೂ ನಮ್ಮ ನುಡಿ ರಕ್ಷಣೆಗಾಗಿ ನುಡಿಸಿರಿ ನೀಡುತ್ತಿರುವ ಕೊಡುಗೆ ಅಪಾರ. ಈ ಸಮ್ಮೇಳನದಲ್ಲಿ ನಾಲ್ಕು ವೇದಿಕೆಗಳಲ್ಲಿ ನಡೆಯುವ ಕಾರ್‍ಯಕ್ರಮಗಳು ಕಣ್ಣಿಗೆ ಹಬ್ಬದೂಟ ಉಣಬಡಿಸುತ್ತವೆ. ಪ್ರಧಾನ ವೇದಿಕೇಯಾದ ರತ್ನಾಕರವರ್ಣಿ ವೇದಿಕೆಯಲ್ಲಿ ಬೆಳಗಿನಿಂದ ಕಾರ್‍ಯಕ್ರಮಗಳು ನಡೆದರೆ, ಇನ್ನು ಕು.ಶಿ. ಹರಿದಾಸ ಭಟ್ಟ ವೇದಿಕೆ, ಯಕ್ಷಮಂಟಪ, ಹಾಗೂ ಕೆ. ವಿ ಸುಬ್ಬಣ್ಣ ಬಯಲು ರಂಗ ಮಂದಿರ ಸಂಜೆಯಾಗುತ್ತಿದ್ದಂತೆ ಗರಿ ಬಿಚ್ಚಿಕೊಳ್ಳುತ್ತವೆ. ಪ್ರಧಾನ ವೇದಿಕೆಯ ವಿನ್ಯಾಸ ನಿಜಕ್ಕೂ ಗಮನಸೆಳೆಯುವಂತದ್ದು, ಹಾಗೆ ವೇದಿಕೆಯಲ್ಲಿ ಬೆಳಿಗ್ಗೆ ೮;೩೦ ರಿಂದ ಆರಂಭವಾಗುವ ಕಾರ್‍ಯಕ್ರಮಗಳು ರಾತ್ರಿ ೯;೦೦ ಗಂಟೆಯ ವರೆಗೂ ಅವಿರತವಾಗಿ ನಡೆಯುತ್ತದೆ. ಹೀಗೆ ಕಾರ್‍ಯಕ್ರಮಗಳು ನಡೆದರೂ ಎಲ್ಲೂ ಬೇಸರ ತರಿಸುವುದಿಲ್ಲ. ಇಲ್ಲಿ ಭಾವಲಹರಿ, ಕವಿಸಮಯ, ಕವಿನಮನ, ವಿಚಾರ ಗೋಷ್ಠಿ, ಕಥಾಸಮಯ ದಂತ ಹಲವು ಪ್ರಕಾರದ ಕಾರ್‍ಯಕ್ರಮಗಳು ಇಲ್ಲಿ ನಡೆಯುತ್ತವೆ. ಹಾಗೆ ಸಂಜೆ ಐದು ಗಂಟೆ ಗೆ ನಡೆಯುವ ಮಾತಿನ ಮಂಟಪ ಕಾರ್‍ಯಕ್ರಮದಲ್ಲಿ ನಾಡಿನ ಖ್ಯಾತ ಹಾಸ್ಯಗಾರರು ನಗಿಸುವ ಪರಿ ಅದ್ಭುತ..
ಭಾಷೆ ಸಾಹಿತ್ಯದ ವಿಚಾರ ಬಂದಾಗ ನುಡಿಸಿರಿಯಲ್ಲಿ ನಡೆಯುವ ಕಾರ್‍ಯಕ್ರಮಗಳು ಎಲ್ಲರಿಗೂ ಮಾದರಿ. ಈ ಸಂದರ್ಭದಲ್ಲಿ ನಡೆಯುವ ಪುಸ್ತಕ ಪ್ರದರ್ಶನ ಮತ್ತು ಮಾರಟದಲ್ಲಿ ನಾಡಿನ ಖ್ಯಾತ ಪ್ರಕಾಶನಗಳು ಇಲ್ಲಿಗೆ ಬರುತ್ತವೆ. ಈ ವರ್ಷ ಕಾಲೇಜಿನ ಎದುರಿಗೆ ಪ್ರದರ್ಶನಕ್ಕಿಟ್ಟಿರುವ ಚಿತ್ರಗಳು , ಅಕ್ವೆರಿಯಂಗಳು, ಕಾಲೇಜಿನ ಬಲಭಾಗ-ಎಡಭಾಗದಲ್ಲಿರುವ ಬೃಹತ್ ಯಕ್ಷಗಾನ ಪ್ರತಿಮೆಗಳು ನೋಡುಗರ ಮನಸ್ಸನ್ನು ಸೂರೆಗೊಳ್ಳುತ್ತದೆ. ನಿಜಕ್ಕೂ ಆಳ್ವಾಸ್ ನುಡಿಸಿರಿಯಲ್ಲಿ ಯಥೇಚ್ಛವಾಗಿ ಕಾಣ ಸಿಗುವುದು ಅಲ್ಲಿನ ವಿದ್ಯಾರ್ಥಿಗಳ ಶಿಸ್ತು. ಊಟದ ವ್ಯವಸ್ಥೆಯಲ್ಲಿ,ಸಹಾಯದಲ್ಲಿ, ನಗುಮುಖದ ಅವರ ಆದರ ಆದಿತ್ಯಗಳನ್ನು ಕಂಡಾಗ ಮನ ಖುಷಿಗೂಳ್ಳುತ್ತದೆ. ಕನ್ನಡ ಮನಸ್ಸು -ಸಮನ್ವಯದೆಡೆಗೆ ಎಂಬ ಪರಿಕಲ್ಪನೆ ಯಲ್ಲಿ ಆರಂಭವಾಗಿರುವ ಈ ವರ್ಷದ ನುಡಿಸಿರಿ ಯಶಸ್ವಿಯಗಿ ಆರಂಭವಾಗಿದೆ. ಇಂತದ್ದೂಂದು ಸಮ್ಮೇಳನ ನಾಡು -ನುಡಿಯ ರಕ್ಷಣೆಗೆ ನಿಜವಾಗಿಯೂ ಅಗತ್ಯವಿದೆ ಎಂದೆನಿಸುವುದಿಲ್ಲವೆ.

Friday, November 6, 2009

ಕಷ್ಟ ಪಡದೆ ಮನುಷ್ಯ ಜೀವನದಲ್ಲಿ ಮೇಲೆ ಬರಲಾರ ...........


"ನನ್ನ ಜೀವನದ ಕಷ್ಟ ಗಳು ,ಸಂಕಟಗಳು ,ದುಃಖಗಳು ನನ್ನಿಂದ ಕವಿತೆ ಬರೆಯುವಂತೆ ಮಾಡಿಸಿತು ,ಇಲ್ಲದಿದ್ದರೆ ಸಾಮಾನ್ಯ ಕಲ್ಲು ಕುಟಿಗನ ಮಗನಾಗಿದ್ದವನು ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ". ಆಳ್ವಾಸ್ ನುಡಿಸಿರಿಯ ಎರಡೆನೇ ದಿನದ ಕವಿಸಮಯದ ಕಾರ್ಯಕ್ರಮದಲ್ಲಿ ಕವಿ ಸತ್ಯಾನಂದ ಪಾತ್ರೋಟ ಈ ಮಾತನ್ನು ಹೇಳಿದಾಗ ಆ ಮಾತಿಗೆ ನನ್ನ ಯೋಚನೆ ಸೇರಿಸುವುದು ಅನಿವಾರ್ಯವಾಗಿತ್ತು.
ನಾವು ಕನ್ನಡ ಸಾಹಿತ್ಯದಲ್ಲಿ ಅಥವಾ ಬೇರೆ ಸಾಹಿತ್ಯ ಗಳಲ್ಲಿರುವ ಕವಿಗಳನ್ನು, ಅವರ ಹಿಂದಿನ ಇತಿಹಾಸ ಕೆದಕಿದಾಗ ಎಲ್ಲ ಕಡೆ ಇಂತ್ತದ್ದೊಂದು ಕಷ್ಟಗಳು ,ಸಂಕಟಗಳು ,ಒಂದುತುತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ಕವಿಗಳು ಸಿಗುತ್ತಾರೆ."ಕಷ್ಟ ಪಡದೆ ಯಾವ ಮನುಷ್ಯನು ಜೀವನದಲ್ಲಿ ಮೇಲೆ ಬರಲಾರ" ಎಂಬ ತತ್ವ ವನ್ನು ನಂಬಿದವನು ನಾನು .ಆದರೆ ಎಲ್ಲ ಕಷ್ಟ ಗಳು ಕವಿಗಳಿಗೆ ಏಕೆ ಬರುತ್ತದೆಎಂಬ ಪ್ರಶ್ನೆಗೆ ನನಗಿನ್ನೂ ಉತ್ತರ ಸಿಕ್ಕಿಲ್ಲ . ಹಾಗೇನು ನಾನು ಕವಿಗಳನ್ನು ತೆಗಳುತ್ತಿಲ್ಲ "ಒಂದು ಮಾತು ಹೇಳಬಲ್ಲೆ ನಾವೆಲ್ಲರೂ ಮಾತನಾಡಿ ನಮ್ಮ- ನಮ್ಮ ದುಃಖ ವನ್ನು ನಿಗಿಸಿಕೊಳ್ಳುತ್ತೇವೆ. ಆದರೆ ಸಾಹಿತಿಗಳು ,ಕವಿಗಳಿಗೆ ಅಕ್ಷರವೇ ಮಾತು ,ಅಕ್ಷರವಿಲ್ಲದೆ ಅವರಿಲ್ಲ . ಅದರಿಂದಲೇ ಅವರ ದುಃಖವನ್ನು ತೋಡಿಕೊಳ್ಳುತ್ತಾರೆ " ಇದಕ್ಕೆ ಉತ್ತಮ ಉದಾಹರಣೆಯಾಗಿ ದ.ರಾ. ಬೇಂದ್ರೆ ಸಿಗುತ್ತಾರೆ ಹುಟ್ಟಿನಿಂದ ಸಾಯುವವರೆಗೂ ಕಷ್ಟದಲ್ಲೇ ಬದುಕಿದವರು ಇವರು , ತನ್ನ ಮಗ ತೀರಿಹೋದಾಗ ಅವರ ಹೆಂಡತಿ ಅವರನ್ನೇ ನೋಡುತ್ತಿರುವುದನ್ನು ಗಮನಿಸಿ ಅಂತ ದುಃಖ ದಲ್ಲೂ "ನಿ ಹಿಂಗ ನೋಡ ಬ್ಯಾಡ ನನ್ನ " ಎಂದು ಗೀತೆ ರಚಿಸಿದವರು. ಕಷ್ಟ ಸಂಕಟ ಗಳು ಮನುಷ್ಯನನ್ನು ಪರಿಪಕ್ವ ನನ್ನಾಗಿಸುತ್ತದೆ . ಅವರ ಅನುಭವಗಳು ಅಕ್ಷರ ರೂಪ ಪಡೆದು ಕವನವಾಗಿ ಹುಟ್ಟುವುದೇ ರೋಚಕ . ಇಂತ ಕವಿ ಗಳಿಗೆ ನನ್ನ ಪ್ರಣಾಮಗಳು ..........