Saturday, August 21, 2010

ಮುಂಗಾರು ಮತ್ತೆ ಹಿತ ನೀಡಬಹುದೇ...

 ತನ್ನ ಜೀವನದ ಅಮೂಲ್ಯ ಘಟ್ಟವನ್ನು ಕತ್ತಲ ಕೋಣೆಯಲ್ಲಿ ಕಳೆದು ಬ್ರಹ್ಮಚಾರಿಯಾಗಿಯೆ ಉಳಿದಿರುವ ಮೂವಳ್ಳಿನಾರಾಯಣ್ ಎಂಬುವವರ ಕಥೆ ಆಧರಿಸಿದ ಚಿತ್ರ.. ನಿಜ..ಚಿತ್ರ ನೋಡದೆ ಆ ಚಿತ್ರದ ಬಗ್ಗೆ ಬರೆಯಬಾರದು ಎಂಬ ಧೃಡ ನಿರ್ಧಾರದಲ್ಲಿದ್ದೆ ..ಆದರೆ ದೃಶ್ಯ ಮಾಧ್ಯಮಗಳಲ್ಲಿ ಆ ಚಿತ್ರದ ಬಗ್ಗೆ ಮೊದಲು ಅಷ್ಟೊಂದು ಪ್ರಚಾರ ಸಿಕ್ಕಿರಲಿಲ್ಲಲ್ಲ ವಾಗಿತ್ತು.. ಬಿಎಂಟಿಸಿ ಬಸ್ಗಳಲ್ಲಿ ಹೋಗುವಾಗ ಹೊಸ ಚಿತ್ರಗಳ ಬ್ಯಾನರ್ ಗಳನ್ನುನೋಡುವ ಹವ್ಯಾಸ ನನಗಿದೆ..ಹೀಗೆ ಒಂದು ಸಾರಿ ನೋಡುವಾಗ ಆ ಚಿತ್ರದ ಬ್ಯಾನರ್ ನೋಡಿದ್ದೆ....ಭಾರತದ ಒಂಭತ್ತು ಪ್ರಧಾನಿಗಳಿಗೆ ತಿಳಿಯದೆ ಹೋದ ಕಥೆ....  ಮತ್ತೆ ಮುಂಗಾರು....ಕಡಲ ತೀರದ ಕವಿತೆ.   
ಮುಂಗಾರು ಮಳೆ ಎಂಬ ಮೃದುಲ ಹಿಟ್ ಚಿತ್ರ... ಮೊಗ್ಗಿನ ಮನಸು ಎಂಬ ಹುಡುಗಿಯರ ಬಾಳ ಕವಿತೆಯ ಚಿತ್ರ ಮಾಡಿ ಜನರಿಗೆ ನೀಡಿದ್ದ ಎಂ.ಕೃಷ್ಣಪ್ಪ ನವರ ಚಿತ್ರ... ಮುಂಗಾರು ಮತ್ತೆ ಬರಲು ಈ ಕಥೆಯೆ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ..ಶ್ರೀನಗರ ಕಿಟ್ಟಿ ಹಾಗು ತನ್ನ ಹನ್ನೋಂದು ಮಂದಿ ಗೆಳೆಯರ ಕತೆ ಈ ರೀಲ್ನಲ್ಲಿ....ನಾರಾಯಣ ಮತ್ತು ತನ್ನ ಹನ್ನೋಂದು ಮಂದಿ ಗೆಳೆಯರ ಕಥೆ ರಿಯಲ್ನಲಲ್ಲಿ?...  ನಿಜಕ್ಕು...ಕಲಿಯದವರು,ಕಲಿತವರು,ಜೀವನದಲ್ಲಿ ಗೆದ್ದವರು,ಸೋತವರು ಎಲ್ಲರಿಗೂಬಾಂಬೆ ಎಂಬ ಮಾಯೆ ತನ್ನ ಕೈ ಚಾಚಿ ತಬ್ಬಿಕೊಲತ್ತಾಳೆ.ನಾರಾಯಣ್ ಅವರ ಜೀವನದಲ್ಲಿ ಆದದ್ದು ಅದೆ..ಹೊಟ್ಟೆ ಹೊರೆಯುವುದಕ್ಕಾಗಿ ಮಾಯಾಕೂಪದ ನಗರಿಗೆ ಪಾದ ಬೆಳೆಸಿದ ಅವರಿಗೆ ಮೋಸವಾಗಲಿಲ್ಲ.. ಯಾಕೆಂದರೆ ಬಾಂಬೆ ಯಾವತ್ತು ಯಾರಿಗೂ ಮೋಸಮಾಡುವುದಿಲ್ಲ ತುತ್ತು ಅನ್ನಕ್ಕೆ ಅಲ್ಲಿ ಎಂದೂ ಭರವಿಲ್ಲ. ಆದರೆ ಭದ್ರತೆ ಬಗ್ಗೆ ಅಲ್ಲಿಯಾರೂ ಖಾತ್ರಿಕೊಡುವುದಿಲ್ಲ.ನಾವೆ ನೋಡಿಕೊಳ್ಳಬೆಕು...ನಾರಾಯಣ ಹಾಗೂ ಅವರ ಹನ್ನೂಂದು ಮಂದಿ ಗೆಳೆಯರಿಗೆ ಹಡಗಿನಲ್ಲಿ ಕೆಲಸ ಸಿಕ್ಕಿತು...ಆದರೆ ಅವರ ಜೀವನದ ಹಡಗು ವಿರುದ್ದ ದಿಕ್ಕಿಗೆ ತಿರುಗಿತು..ಹಡಗು ಭಾರತೀಯ ಗಡಿ ದಾಟಿ ಪಾಕಿಸ್ತಾನದ ಬಾಗಿಲಿನಲ್ಲಿ ನಿಂತಿತ್ತು...ಮುಂದೆ 24 ವರ್ಷಗಳ ಕತ್ತಲ ಕೋಣೆಯ ಶಿಕ್ಷೆ ಜಾರಿ...ಅದರೆ ಇಷ್ಟಾದರೂ ಭಾರತದ ಪ್ರಧಾನಿಯಾಗಿದ್ದ.ಪ್ರಧಾನಿಯಾದ ಯಾರಿಗೂ ಈ ವಿಷಯ ಗಮನಕ್ಕೆ ಬರಲಿಲ್ಲ..ಇದೆ ಈ ಚಿತ್ರದ ಸಾರ.. ಹಾಗಂತ ನಿರ್ದೇಶಕ ದ್ವಾರ್ಕಿ ಅವರ ಶ್ರಮ ಕಥೆ ಕಟ್ಟುವಲ್ಲಿ ನಿಜವಾಗಿಯೂ ಇದೆ.ಚಿತ್ರಕ್ಕೋಂದು ಪ್ರೇಮ ಕಥೆ ನೀಡಿ ಸುಂದರ ಚಿತ್ರವಾಗಿಸಿದ್ದಾರೆ..!!! ನಾರಾಯಣ ಪಾಕ್ ಕಾಲಾಪಾನಿಗೆ ಹೊಗುವಾಗ ಅವರ ವರ್ಷ 24 ಬಿಡುಗಡೆಯಾದಾಗ..48..ಯೌವ್ವನ ಕತ್ತಲ ಕೋಣೆಯಲ್ಲಿ ನಶಿಸಿ ಹೊಗಿತ್ತು....
ಕಥೆ ಇರಬೇಕು ಮನಸ್ಸಿಗೆ ಮುಟ್ಟುವ ಹಾಗೆ... 
ಬೆಂಗಳೂರೆಂದರೆ... ಸುಮ್ಮನೆ ಸರಿದು ಹೋಗುವ ಮೊಡವಲ್ಲ...ಇಲ್ಲಿನ ಗಲ್ಲಿ ಗಲ್ಲಿ ಜನರ ನಡುವೆ ಒಂದು ಕಥೆ ಇರುತ್ತದೆ. ಆ ಕಥೆ ಮಾತ್ರ ಸಿನಿಮಾವಾಗುತ್ತದೆ ಎಂಬ ಕಾಲವಿತ್ತು... ಹೌದು....ಹಿಂದೊಂದು ಕಾಲ ಹಾಗೆಯೆ ಇತ್ತು...ಯಾಕೆಂದರೆ ಆಗ ಗಾಂದಿನಗರ ಎಂಬ ಸಿನಿಮಾ ಲೋಕ ಬೆಂಗಳೂರಿಗರಿಗೆ ಮಾತ್ರ ಸೀಮಿತವಾಗಿತ್ತು..ಯಾವತ್ತು ಕಥೆ ನಮ್ಮ ಸುಪ್ತ ಮನಸ್ಸಿಗೆ ಇಷ್ಟವಾಗಬೇಕು...ಹಾಗೆ ಅಂತಹ ಕಥೆಯನ್ನು ಕ್ಯಾಮೆರಾ ಕಣ್ಣಿನಲ್ಲಿ ತೋರಿಸುವ ಕಲೆ ಇರಬೇಕು..

Sunday, August 8, 2010

ಅವನೆಂಬ ನಿಗೂಢವೂ... ಆತನ ಸಿನಿಮಾಗಳೆಂಬ ಗುಂಗೀ ಹುಳವೂ!




ಬಹುಶಃ ಆತನೊಬ್ಬನೇ ಇರಬೇಕು!
 45 ವರ್ಷದ ಚಿತ್ರ ಜೀವನದ ಇತಿಹಾಸದಲ್ಲಿ ಆತನ ಗಮನ ಸಸ್ಪೆನ್ಸ್ ಥ್ರಿಲ್ಲರ್‌ ಬಿಟ್ಟರೆ ಬೇರೆ ಯಾವ ಪ್ರಕಾರಗಳತ್ತಲೇ ಹರಿದಿಲ್ಲ... ಲವ್‌ಸ್ಸ್ಟೋರಿ, ಫ್ಯಾಮಿಲಿ ಸೆಂಟಿಮೆಂಟ್‌ ಯಾವುದಾದರೂ ಸರಿ ಅಲ್ಲೊಂದು ಸಸ್ಪೆನ್ಸ್ ನೀಡದಿದ್ದರೆ ಅದು ಆತನ ಮಟ್ಟಿಗೆ ಚಿತ್ರವೆ ಅಲ್ಲ....
  
 ‘ಜನರು ಚಿತ್ರ ನೋಡಬೇಕಾದರೆ ಅವರಿಗೆ ಚಿತ್ರಮಂದಿರದ ಕುರ್ಚಿಯಲ್ಲಿ ಒಂದು ನಿಮಿಷವೂ ಬಿಡದೆ ಕೂರುವಂತೆ ಮಾಡುವ ತಾಕತ್ತು ಚಿತ್ರದಲ್ಲಿ ಇರಬೇಕು. ಅದು ಸಸ್ಪೆನ್ಸ್ ಚಿತ್ರಗಳಿಂದ ಮಾತ್ರ ಸಾಧ್ಯ’ಅನ್ನುತ್ತಾನೆ,ಆಲ್‌ಫ್ರೆಡ್‌ ಹಿಚ್‌ಕಾಕ್‌
ಕೌತುಕ,ಹಾಸ್ಯ,ಕಾಮ ಈ ಮೂರು ವಿಷಯಗಳು ಅತನ ಚಿತ್ರದ ಕಥಾವಸ್ತು. 45ವರ್ಷಗಳವರೆಗೆ, 50ಕ್ಕಿಂತ ಹೆಚ್ಚು ಚಿತ್ರಕಥೆಗಳು ಈ ಮೂರು ಕಥಾವಸ್ತುವಿನ ಮೇಲೆ ಆತನ ತಲೆಯಲ್ಲಿ ಮೂಡಿದ್ದು ಆಶ್ಚರ್ಯವೇ ಸರಿ...
ಬಾಲ್ಯ
ಆಲ್‌ಫ್ರೆಡ್‌ ಜೋಸೆಫ್‌ ಹಿಚ್‌ಕಾಕ್‌..ಇದೆ ಆಗಸ್ಟ್ 13ಕ್ಕೆ ಅತನ 111ನೆ ವರ್ಷದ ಹುಟ್ಟುಹಬ್ಬ.1899 ರಲ್ಲಿ ಇಂಗ್ಲೆಂಡ್‌ನ ಲೆಯ್‌ಟಾನ್‌ಸ್ಟೀನ್‌ ಊರಿನ ಅಪ್ಪಟ ಮಧ್ಯಮ ವರ್ಗದ ಕುಟುಂಬದಲ್ಲಿ ಜನನ.ಲಂಡನ್‌ ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈಸಿದಾಗ ಅತನ ಕಣ್ಣಲ್ಲಿ ಚಿತ್ರರಂಗ ಹೊಕ್ಕುವ ಮಿಂಚು ಸುಳಿದಾಡಿತ್ತು.
 ಅದಕ್ಕಾಗಿ ಅತ ಪ್ಲೇಯರ್‌‌ ಲಾಸ್ಕಿ ಸ್ಟುಡಿಯೋದಲ್ಲಿ ಚಿತ್ರಗಳ ಟೈಟಲ್‌ ಕಾರ್ಡ್‌ ಹಾಗೂ ಮೂಕಿ ಚಿತ್ರಗಳ ಪೋಸ್ಟ್ ಪ್ರೊಡಕ್ಷನ್‌ ಕಾರ್ಯ ಮಾಡುತ್ತಾ ತನ್ನ ಚಿತ್ರ ಜೀವನ ಆರಂಭಿಸಿದ..
 ಅಲ್ಲಿ ಆತ, ಕಲಾನಿರ್ದೇಶನ,ಚಿತ್ರಕಥೆ ರಚನೆ,ಎಡಿಟಿಂಗ್‌ನ ಒಳಗೂ ಹೊರಗೂ ಅರಿತುಕೊಂಡು, 1922ರಲ್ಲಿ ಸಹಾಯಕ ನಿರ್ದೇಶಕನಾಗುತ್ತಾನೆ. ಅದೇ ವರ್ಷ ಮಿಸೆಸ್‌.ಪೀಬಾಡಿ ಚಿತ್ರ ನಿರ್ದೇಶಿಸಿದ.ಆದರೆ ಆತನ ನಿಧನದ ನಂತರವೂ ಆ ಚಿತ್ರ ಬಿಡುಗಡೆಯಾಗಲೇ ಇಲ್ಲ.ನಂತರ 1925ರಲ್ಲಿ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಮಾಡಿದ ವೊದಲ ಚಿತ್ರ ದಿ ಪ್ಲೇಶರ್‌ ರ್ಗಾಡನ್‌. ಇದು ಮೂಕಿ ಚಿತ್ರವಾಗಿತ್ತು.1929ರಲ್ಲಿ ಈತನ ವೊದಲ ವಾಕ್‌ ಚಿತ್ರ ಬ್ಲಾಕ್‌ಮೇಲ್‌ ಬಿಡುಗಡೆಯಾಗುವ ಸಮಯದಲ್ಲಿ ದೊಡ್ಡ ಪರದೆಯ ಮೇಲೆ ಚಿತ್ರ ಬರುವುದೆಂದರೆ ವಿಸ್ಮಯ ಎನ್ನುವ ಕಾಲವಾಗಿತ್ತು. ಅಂತದ್ದರಲ್ಲಿ....ಚಿತ್ರಗಳು ಮಾತನಾಡುತ್ತವೆ ಎಂದರೆ.... ದೊಡ್ಡ ಪರದೆಯ ಮೇಲೆ ತನ್ನ ಕಲ್ಪನೆಯ ಚಿತ್ರಗಳು ಮಾತನಾಡುವುದನ್ನು ನೋಡಿ ಒಂದು ಕ್ಷಣ ಆತನೇ ದಿಗ್ಬ್ರಾಂತನಾಗಿದ್ದ...
   1934ರಲ್ಲಿ ಮೆನ್‌ ವು ನೊ ಟು ಮಚ್‌ ಚಿತ್ರ ಆತನಿಗೆ ಹೆಸರು ಹಾಗೂ ಹಣ ಎರಡನ್ನು ತಂದುಕೊಟ್ಟಿತು.ಕೌಟುಂಬಿಕ ಸಂಬಂಧಗಳ ಬಗ್ಗೆ ತನಿಖೆ ನಡೆಸುವ ಸಸ್ಪೆನ್ಸ್ ಚಿತ್ರದ ಮೂಲಕ ಚಿತ್ರ ಜನರ ಬಳಿ ಸೇರಿತ್ತು....
ತನ್ನ ಕಣ್ಣಲ್ಲಿ ಅರಳುವ ಚಿತ್ರಗಳನ್ನೆ ಯಥಾವತ್ತಾಗಿ ಕ್ಯಾಮೆರಾ ಕಣ್ಣಿನಲ್ಲೂ ತೋರಿಸುವ ಚಾಕಚಕ್ಯತೆ ಆತನಲ್ಲಿತ್ತು.ಅದಕ್ಕಾಗಿಯೇ ಆತ ಯಶಸ್ವಿಯಾದ...
ದಿ 39 ಸ್ಟೆಪ್ಸ್(1935),ಸೀಕ್ರೇಟ್‌ ಎಜೆಂಟ್‌(1936)ಹೀಗೆ ಚಿತ್ರಗಳು ವರ್ಷಕ್ಕೂಂದರಂತೆ ಬರುತ್ತಿತ್ತು.ಜಮೈಕಾ ಇನ್‌(1939) ಆತನ ಕೊನೆಯ ಬ್ರಿಟಿಷ್‌ ಚಿತ್ರ...
ತಾನೂ ಕೇವಲ ಬ್ರಿಟಿಷ್‌ ಚಿತ್ರಗಳಿಗೆ ಸೀಮಿತವಾಗಬಾರದು ಎಂದುಕೊಂಡವನೇ ಡಾಪ್ನೇ ಡು ಮೋರಿಯರ್‌ಅವರ ಕಾದಂಬರಿಯನ್ನು 1940ರಲ್ಲಿ ರಿಬೆಕ್ಕಾ ಚಿತ್ರ ಮಾಡಿ ಅದರಲ್ಲಿ ಯಶಸ್ವಿಯಾದ.

   ಪ್ರಮುಖ ಚಿತ್ರಗಳು ಇಡಿ ಹಾಲಿವುಡ್‌ ಚಿತ್ರಜಗತ್ತಿನಲ್ಲಿ ಹಿಚ್‌ಕಾಕ್‌ ಚಿತ್ರಗಳೆಂದರೆ ಜನರನ್ನು ಸೆಳೆಯುವಂತೆ ಮಾಡಿದ್ದು 1941ರಲ್ಲಿ ಬಂದ ಸಸ್ಪೀಶಿಯನ್‌ ಚಿತ್ರ.ತನ್ನ ಗಂಡ ಒಬ್ಬ ಕೊಲೆಗಾರ ಎಂದು ಚಿಂತಿಸುವ ಮಹಿಳೆಯ ಕಥೆ ಆಧಾರಿತ ಚಿತ್ರವನ್ನು ಕೌಟುಂಬಿಕ ಚೌಕಟ್ಟಿನೊಳಗೆ ಅದ್ಭುತವಾಗಿ ಆತ ಚಿತ್ರಿಸಿದ್ದ.ಹಾಲಿವುಡ್‌ನಲ್ಲಿ ಹಿಚ್‌ಕಾಕ್‌ ಯುಗ ಆರಂಭವಾಗಿದ್ದು ಈ ಚಿತ್ರದ ಮೂಲಕ.
 ಆತನ ಚಿತ್ರಗಳಲ್ಲೆ ಮತ್ತೆ ಮತ್ತೆ ಮನಸ್ಸಿಗೆ ಕಾಡುವ ಚಿತ್ರ 1943ರ ಶಾಡೋ ಆಫ್‌ ಡೌಟ್‌. ಕೊಲೆಯಾದ ತನ್ನ ಅಂಕಲ್‌ನನ್ನು ಅಮೇರಿಕಾದ ಮಧ್ಯಮವರ್ಗದ ಜನರಲ್ಲಿ ಕಾಣುವ ಅಮಾಯಕ ಯುವತಿಯ ಕಥೆ ಇದರಲ್ಲಿ ಆಕೆಯ ಪಾತ್ರ ಪೋಷಣೆ ಅದ್ಭುತವಾಗಿ ದಾಖಲಾಗಿತ್ತು.
ಹಿಚ್‌ಕಾಕ್‌ನ ಪರ್ವಕಾಲ
   ಈತ ಈಗಲೂ ನೆನಪಾಗುತ್ತಾನೆ ...1950 ರಿಂದ 60ರ ಕಾಲ ಹಿಚ್‌ಕಾಕ್‌ ಚಿತ್ರಗಳ ಪರ್ವಕಾಲ. ಒಂದರ ಹಿಂದೆ ಒಂದರಂತೆ ನೆನಪಿಸಿಕೊಳ್ಳುವ,ಕಾಡುವ ಚಿತ್ರಗಳನ್ನು ಕೊಟ್ಟಿದ್ದು ಅತ ಈ ಕಾಲದಲ್ಲಿ ಐ ಕಾನ್‌ಫೆಸ್‌(1953),ಹೆಸರಲ್ಲೆ ಕ್ರಾಂತಿ ಮಾಡಿದ ಚಿತ್ರ ಡಯಲ್‌ ಎಂ ಫಾರ್‌ ಮರ್ಡ್‌ರ್‌(1954),ಟು ಕ್ಯಾಚ್‌ ಎ ಥೀಫ್‌(1955),ಮೆನ್‌ ವು ನೊ ಟು ಮಚ್‌ ಚಿತ್ರದ ರೀಮೇಕ್‌(1956),ಹಾಸ್ಯಾತ್ಮಕ ಸಸ್ಪೆನ್ಸ್ ಚಿತ್ರ ದಿ ಟ್ರಬಲ್‌ ವಿತ್‌ ಹ್ಯಾರಿ(1955),ಡಾಕೊಡ್ರಾಮಾ(1956) ಎಲ್ಲವೂ ಆತನಿಗೆ ಹೆಸರು ತಂದುಕೊಟ್ಟಿತು.
ಕೊನೆಗೆ ನಿರ್ಮಾಪಕ
ವರ್ಷಕ್ಕೆ ಒಂದು ಎರಡರಂತೆ ಹಿಚಕಾಕ್‌ ಚಿತ್ರ ಮಾಡುತ್ತಲೆ ಇದ್ದ ಅತನ 1969 ರಲ್ಲಿ ಬಿಡುಗಡೆಯಾದ ಟೋಪೆಜ್‌ ಚಿತ್ರದ ಸೋಲು ಆತನಿಗೆ ಅರಗಿಸಿಕೊಳ್ಳಲಾಗಲಿಲ್ಲ.ಕೊನೆಗೆ ಆತನೆ ಚಿತ್ರ ನಿರ್ಮಿಸುವ ನಿರ್ಧಾರಕ್ಕೆ ಬಂದು 1972ರಲ್ಲಿ ಫ್ರೇನ್‌ಜಿ ಚಿತ್ರ ಮಾಡಿದ ಅದರ ಚಿತ್ರಕಥೆ ತಯಾರಿಸಿ ಚಿತ್ರ ಬಿಡುಗಡೆಯಾಗಲು ತೆಗೆದುಕೊಂಡಿದ್ದು ಬರೋಬ್ಬರಿ ನಾಲ್ಕು ವರ್ಷ....
ಒಬ್ಬ ಅಮಾಯಕ ಮನುಷ್ಯ ಸಿರಿಯಲ್‌ ಕಿಲ್ಲರ್‌ ಆಗುವ ಕಥಾಹಂದರವಿದ್ದ ಈ ಚಿತ್ರ ಹಾಲಿವುಡ್‌ ನಲ್ಲಿ ಮತ್ತೆ ಹಿಚ್‌ಕಾಕ್‌ ಯುಗ ಮರಳಿಸಿತ್ತು.. 1976ರಲ್ಲಿ ಬಂದ ಫ್ಯಾಮಿಲಿ ಪ್ಲಾಟ್‌ ಈ ಸಸ್ಪೆನ್‌‌ಸ ಥಿಲ್ಲರ್‌ ಹರಿಕಾರನ ಕೊನೆಯ ಚಿತ್ರ...
ಕೊನೆಗಾಲ
  50ಕ್ಕಿಂತ ಹೆಚ್ಚು ತನ್ನ ಮೂರು ಕಥಾವಸ್ತುವಿನ ಹಂದರದಿಂದ ಹೊರಬೀಳದೆ ಇದ್ದರೂ, ತನ್ನ ಚಿತ್ರದಲ್ಲಿ ಎಲ್ಲೂ ಜನರಿಗೆ ಬೇಸರವಾಗದಂತೆ ಚಿತ್ರಮಂದಿರದ ಕುರ್ಚಿಯಲ್ಲಿ ಭದ್ರವಾಗಿ ಕೂರುವಂತೆ ಮಾಡುತ್ತಿದ್ದ್ದ... ಹೀಗೆ ಹೇಳುವ ಬದಲು ಆತನ ಚಿತ್ರವೆಂದರೆ ಜನ ಕುರ್ಚಿ ಬಿಟ್ಟು ಎಳುತ್ತಿರಲ್ಲಿಲ್ಲ ಎನ್ನುವುದೇ ಸಮಂಜಸವಾಗುತ್ತದೆ.ತನ್ನ ಕೊನೆಗಾಲದಲ್ಲಿ ಹೃದಯದ ತೊಂದರೆ ಹಾಗೂ ಲಿವರ್‌ ಫೇಲ್ಯೂರ್‌ ನಿಂದ ವೀಪರೀತ ಸಮಸ್ಯೆಗೊಳಗಾಗಿದ್ದ ಹಿಚ್‌ಕಾಕ್‌ ಎಂಬ ಮಹಾನ್‌ ಸಸ್ಪೆನ್ಸ್ ಥಿಲ್ಲರ್‌ ದೈತ್ಯ ಎಪ್ರಿಲ್‌ 28ರಂದು ಜಗತ್ತಿನಿಂದ ಮರೆಯಾದ.
ಕೊನೆಹನಿ
   ವಿಶ್ವ ಚಿತ್ರರಂಗದ ವೊದಲ ಚಿತ್ರ ದಿ ಗ್ರೇಟ್‌ ಟ್ರೈನ್‌ ರಾಬರಿಯಿಂದ ಇತ್ತಿಚೇಗೆ ಬಿಡುಗಡೆಯಾದ ಚೆಲುವೆಯೇ ನಿನ್ನ ನೋಡಲು...ಚಿತ್ರದವರೆಗೆ ಸಿನಿಮಾ ಸಮುದ್ರದ ಇತಿಹಾಸ ಬಹಳ ದೊಡ್ಡದು.
ಇಲ್ಲಿ ಬಂದು ಜೀವನ ಕಂಡುಕೊಂಡವರಿದ್ದಾರೆ ಹಾಗೇ ಕಳೆದುಕೊಂಡವರು ಇದ್ದಾರೆ. ಚಿತ್ರಗಳಲ್ಲಿ ಹೊಸ ಹೊಸ ಪ್ರಕಾರಗಳನ್ನು ಹುಡುಕುವ ನಿರ್ದೇಶಕರ ನಡುವೆ ಹಿಚ್‌ಕಾಕ್‌ ನಂತವರೂ ಬಲು ಅಪರೂಪವಾಗುತ್ತಾರೆ.

Friday, July 30, 2010

ಸಿನಿಮಾ ಎಂದರೆ ಬರಿ ಬೆಳ್ಳಿ ಪರದೆಯಲ್ಲ ಅದೊಂದು ಜೀವನ....

ಅವನು ಯಾವ ಚಿತ್ರವನ್ನೂ ಹಣಗಳಿಸಬೇಕು,ಜನರಿಗೆ ಮಾಧ್ಯಮಗಳ ಬಗ್ಗೆ ಪರಿಚಯವಾಗಬೇಕು ಎಂದು ಮಾಡಿದವನೇ ಅಲ್ಲ.ತನ್ನಿಷ್ಟಕ್ಕಾಗಿ ಚಿತ್ರಿಸುತ್ತಿದ್ದ ಅಲ್ಲಿ ಸಮಾಜದ ಒಳಿತು ಕೆಡುಕು ಗಳನ್ನು ಹೊರಗೆ ಹಾಕುತ್ತಿದ್ದ ಬದುಕಿನ ಆಡುಂಬೋಲಗಳಿಗೆ ತನ್ನದೆ ಆದ ಯೋಚನೆಯಲ್ಲಿ ಚಿತ್ರ ರೂಪವನ್ನು ನೀಡುತ್ತಿದ್ದ. ಅದೇ ಅವನ ಗೆಲುವನ್ನು ಬರೆಯುತ್ತದೆ ಎಂಬ ಯಾವ ಸುಳಿವೂ ಆತನಿಗಿರಲಿಲ್ಲ;ಗೆದ್ದುಬಿಟ್ಟ!
ಆತನ ಹೆಸರು ಫಾಸ್‌ ಬೈಂಡರ್‌...
      ಜರ್ಮನ್‌ ಚಿತ್ರ ಜಗತ್ತು ಇವನನ್ನು ಮರೆತರೂ, ವಿಶ್ವದ ಚಿತ್ರಪ್ರೇಮಿಗಳು ಈತ ನಿರ್ದೇಶಿಸಿದ ಚಿತ್ರಗಳ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಬೈಂಡರ್‌ ಮೂಸೆಯಲ್ಲಿ ಅರಳುವ ಸಿನಿಮಾಗಳು ವಾಸ್ತವ ಜಗತ್ತನ್ನು ಪರಿಚಯಿಸುತ್ತವೆ. ಬಾಲ್ಯದಲ್ಲಿ ಕಂಡ ,ಕಷ್ಟ-ಸುಖಗಳ ಬಗ್ಗೆ, ಬದುಕಿನ ಜಂಜಾಟ, ಆರ್ಥಿಕತೆಯ ತೋಳಲಾಟದ ಬಗ್ಗೆ ಫಾಸ್‌ ಮಾತ್ರ ಮನಮುಟ್ಟುವಂತೆ ಚಿತ್ರಿಸಿದ್ದಾನೆ. ಆತನ ಚಿತ್ರಕ ಶಕ್ತಿಗೆ ಸಲಾಂ ಹೊಡೆಯುತ್ತದೆ ಚಿತ್ರರಂಗ.ಬರೇ 37 ವರ್ಷ ಮಾತ್ರ ಬದುಕಿದ ಈತ 16 ವರ್ಷಗಳನ್ನು ಚಿತ್ರರಂಗದಲ್ಲಿಯೇ ಕಳೆದುಬಿಟ್ಟ.ಈ ವೇಳೆಯಲ್ಲೇ 44 ಚಿತ್ರ ನಿರ್ದೇಶಿಸಿ ತನ್ನ ಪ್ರಚಂಡ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದ. ಈ ಚಿತ್ರಗಳು ಎಂದಿಗೂ ನಮ್ಮ ನಿರೀಕ್ಷೆಯನ್ನು ಹುಸಿ ಮಾಡಲಾರವು.
ಹಾಗೆ ಕಳೆಯಿತು ಬಾಲ್ಯ...
 1945ರ ಮೇ11ರಲ್ಲಿ ಜರ್ಮನ್‌ ನ ಬಡ ಮಧ್ಯಮ ವರ್ಗದಲ್ಲಿ ಜನಿಸಿದ ಬೈಂಡರ್‌ ಗೆ ಬಡತನ ಆಟದ ವಸ್ತುವಾಯಿತು.ಅಪ್ಪ ಸಾಮಾನ್ಯ ಫಿಸಿಶಿಯನ್‌,ತಾಯಿ ಅನುವಾದಕಿ. ಕಲಿಯಲು ಹೆಚ್ಚೇನೂ ಆಸಕ್ತಿ ವಹಿಸಲಿಲ್ಲ. ಜರ್ಮನ್‌ ಆರ್ಥಿಕತೆಯ ಬಗ್ಗೆ ನನಗೇನೂ ತಿಳಿದಿದೆ ಅದನ್ನು ನನ್ನ ಮಾಧ್ಯಮದಲ್ಲಿ ತೋರಿಸಬೇಕು ಅನ್ನುವ ಅವನ ಅದಮ್ಯ ಆಸೆ ಸಿನಿಮಾ ಮಾಧ್ಯಮದೆಡೆಗೆ ಆತನನ್ನು ತಿರುಗಿಸಿತು.ಕಣ್ಣಲ್ಲಿ ಚಿತ್ರಗಳ ಬಗ್ಗೆ ವಿಪರೀತ ಕನಸುಗಳನ್ನು ಹೊತ್ತುಕೊಂಡು 1965 ರಲ್ಲಿ ಬರ್ಲಿನ್‌ ಫಿಲ್ಮ್ ಆಂಡ್‌ ಟೆಲಿವಿಷನ್‌ ಅಕಾಡೆಮಿಗೆ ಪ್ರವೇಶ ಪರೀಕ್ಷೆ ಬರೆಯುತ್ತಾತನೆ. ಅಲ್ಲಿ ಆತ ಫೇಲ್‌!!
ಇಂತಹ ಅಕಾಡೆಮಿಗೆ ಪ್ರವೇಶ ಪಡೆದು ಅವರು ಹೇಳುವ ರೀತಿಯಲ್ಲಿ ಚಿತ್ರ ನಿರ್ದೇಶಿಸುವ ಬದಲು ತನ್ನ ಕಲ್ಪನೆ ಗೆ ಬಂದಂತೆ ಚಿತ್ರ ಮಾಡಬೇಕು ಎನ್ನುವ ಪ್ರಯತ್ನವಾಗಿ ಅದೇ ವರ್ಷ ದಿ ಸಿಟಿ ಟ್ರ್ಯಾಂಪ್‌ ಎನ್ನುವ ಹತ್ತು ನಿಮಿಷದ ಕಿರು ಚಿತ್ರ ನಿರ್ಮಿಸಿ ಅದರಲ್ಲಿ ಯಶಸ್ವಿಯಾಗುತ್ತಾತನೆ. ಗ್ರಂಥ ಬರೆಯುವ ಮುನ್ನ ಪೀಠಿಕೆ ಎಂಬಂತೆ ಇದ್ದ ಆ ಚಿತ್ರ ಆತನ ಬದುಕಿನ ದಿಕ್ಕನ್ನೇ ಬದಲಿಸುತ್ತದೆ ಅಂದರೆ ಆ ಹತ್ತು ನಿಮಿಷಕ್ಕಾಗಿ ಆತ ಅದೆಷ್ಟು ಕಷ್ಟಪಟ್ಟಿರಬೇಡ?
  ಕಿರು ಚಿತ್ರ ನಿದೇಶಿಸಿದ ಧೈರ್ಯ ಆತನನ್ನು ಬೆಳ್ಳಿತೆರೆಗೆ ಎಳೆಯಿತು.ಅ ಕಾರಣಕಕ್ಕೆ ಅತ 1969ರಲ್ಲಿ ಲವ್‌ ಇಸ್‌ ಕೋಲ್ಡರ್ ದೆನ್‌ ಡೆತ್‌ ಚಿತ್ರ ಮಾಡಿದ.ಪ್ರೇಮ-ಜೀವನ-ಸಾವು ಎಂದು ಮೂರು ವಿಷಯಗಳನ್ನಿಟ್ಟುಕೊಂಡು ಬದುಕಿನ ಪ್ರತಿ ಎಳೆಯನ್ನು ಸವಿವರವಾಗಿ ಬಿಡಿಸಿಟ್ಟ.ಚಿತ್ರ ಬಾಕ್ಸ ಆಫೀಸ್‌ ನಲ್ಲಿ ಮುಗ್ಗರಿಸಿತು.ಅದು ತಮ್ಮದೇ ತಪ್ಪು ಎಂಬುದು ಜರ್ಮನ್‌ ಜನತೆಗೆ ಅನಂತರ ತಿಳಿಯಿತು.ಅದೇವರ್ಷ ಕಾಟ್‌ಜೆಲ್‌ಮೆಚ್‌ರ್‌ ಎಂಬ ಚಿತ್ರ ಮಾಡಿದ ಸುಮಾರಾಗಿ ಗೆದ್ದಿತು.
ಇದು ಮೊದಲ ಗೆಲುವು..
  ಬಿವೇರ್‌ ಆಫ್‌ ಹೋಲಿ ವೋರ್‌ (1971) ಹೀಗೆ ಪ್ರತಿ ವರ್ಷ ಸಿನಿಮಾ ಮಾಡುತ್ತಲೆ ಬಂದ.ಆದರೂ ತಾನಿನ್ನೂ ಒಂದೇ ಒಂದು ಹಿಟ್‌ ಚಿತ್ರ ನೀಡಲಿಲ್ಲ ಎಂಬ ಕೊರಗು ಆತನನ್ನು ಕಾಡುತ್ತಲೇ ಇತ್ತು. 1972 ರಲ್ಲಿ ಆತ ನಿರ್ದೇಶಿಸಿದ ಮರ್ಚೆಂಟ್‌ ಆಫ್‌ ಪೋರ್‌ ಸಿಸನ್ಸ್ ಚಿತ್ರ ವನ್ನು ಜನ ಬಹುವಾಗಿ ಇಷ್ಟಪಟ್ಟರು.ಇಲ್ಲಿ ಬರುವ ಪ್ರತಿ ಪಾತ್ರವನ್ನು ಅಷ್ಟು ಮುತುವರ್ಜಿಯಿಂದ ಪೋಷಿಸಿದ್ದ.ಒಬ್ಬ ಪೋಲಿಸ್‌ ಅಧಿಕಾರಿ ಅಮಾನತುಗೊಂಡು ಹಣ್ಣು ವ್ಯಾಪಾರ ಮಾಡಲು ಅರಂಭಿಸುವ ಕತೆ ಇದರಲ್ಲಿತ್ತು ಜರ್ಮನ್‌ ಜನತೆ,ಆರ್ಥಿಕ ಸಂಕಷ್ಟ. ಕುರುಡು ಪ್ರೀತಿ,ಕಾಮ ಎಲ್ಲವನ್ನು ಬಿಡಿಸಿಟ್ಟ.ಈ ಚಿತ್ರ ಆತನ ಪಾಲಿಗೆ ಟರ್ನಿಂಗ್‌ ಪಾಯಿಂಟ್‌ ಆಯ್ತ.ಕನಸು ಕಂಗಳಲ್ಲಿ ಬಣ್ಣದ ಬದುಕಿಗೆ ಬಂದಿದ್ದ ಬೈಂಡ್‌ರ್‌ನನ್ನು ಅಲ್ಲಿನ ಜನ ತುಂಬು ತೋಳಿನಲ್ಲಿ ಅಪ್ಪಿಕೊಂಡರು.
ಪ್ರಶಸ್ತಿ ತಂದ ಚಿತ್ರ..
  ಮರ್ಚೆಂಟ್‌ ಆಫ್‌ ಪೋರ್‌ ಸಿಸನ್ಸ್ ಚಿತ್ರಜನ ಮೆಚ್ಚಿದರೂ ಪ್ರಶಸ್ತಿ ಗಳಿಸಲಿಲ್ಲ.ಅದರೂ ಆತ ಎಂದು ಅದಕ್ಕಾಗಿ ಹಂಬಲಿಸಿದವನೇ ಅಲ್ಲ. ಅದರೂ ಟೀಕಿಸುವವರು ಅದೇ ಕಾರಣವನ್ನೆ ನೆಪ ಮಾಡಿಕೊಂಡು ಹಂಗಿಸುತ್ತಿದ್ದರು.1974 ರಲ್ಲಿ ಬಂದ ಅಲಿ-ಫಿಯರ್‌ ಈಟ್ಸ ದ ಸೋಲ್‌ ಅತನಿಗೆ ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಟ್ಟಿತು. ಆ ವರ್ಷ ದ ಕ್ಯಾನ್ಸ್ ಫಿಲ್ಪ್ರಶಸ್ತಿ ಬಾಚಿಕೊಂಡಿತು.ಜರ್ಮನ್‌ ಕೆಲಸಗಾರ್ತಿ ಹಾಗೂ ಮೊರೆಕಕ್ೂದ ಅಲೆಮಾರಿ ಕಾರ್ಮಿಕನ ನಡುವಿನ ಪ್ರೇಮ ಕಥೆ ಆಧಾರಿತ ಈ ಚಿತ್ರ ಜನರ ಮನಸೂರೆಗೊಂಡಿತು. ಕಾದಂಬರಿ ಆಧಾರಿತ ಚಿತ್ರಕಕ್ು ಸೈ..ಬರಿ ಸಮಾಜ,ಜೀವನ ಬಗ್ಗೆ ಮಾತ್ರ ಚಿತ್ರ ಮಾಡುತಾ್ತನೆ,ಅತ ಕಂಡ ಬದುಕು ಎಲ್ಲರದ್ದೂ ಆಗಿರುವುದಿಲ್ಲ ಎಂದವರಿಗೆ 1977 ರಲ್ಲಿ ವಾಲ್ಡಿಮರ್‌ ನಬಕ್ೀವ್‌ರ ಕಾದಂಬರಿಯನ್ನು ಡಿಸ್ಪೈರ್‌ ಎಂಬ ಚಿತ್ರ ಮಾಡಿದ.
ಕೊನೆಗಾಲ..
  1982 ನಿರ್ದೇಶಿಸಿದ ಕಾವರಲ್ಲೂ ಆತನ ಕೊನೆಯ ಚಿತ್ರ. ಬದುಕಿನ ಉತ್ತುಂಗ ಕಾಲದಲ್ಲಿ ಕೋಕೆನ್‌ ದಾಸನಾಗಿದ್ದ .ವಿಪರೀತ ಮಾದಕ ದ್ರವ್ಯ ಸೇವನೆ ಆತನ ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿತ್ತು.1982ರ ಜೂನ್‌ 10 ರಂದು ಮ್ಯೂನಿಚ್‌ನ ಅಪಾರ್ಟಮೆಂಟ್‌ನಲ್ಲಿ ಶವವಾಗಿ ಬಿದ್ದಿದ್ದ. ನಿದ್ರೆ ಮಾತ್ರ ಸೇವಿಸಿದ್ದರಿಂದ ಹೃದಾಯಾಘಾತ ವಾಗಿತ್ತು ಎಂದು ನಂತರ ಬಂದ ಶವ ಪರೀಕ್ಷೆ ವರದಿಗಳು ತಿಳಿಸಿದವು.ಅದರೆ ಅಲ್ಲಿನ ಜನತೆ ಹಾಗು ಆತನ ಅಭಿಮಾನಿಗಳು ಆತನ ಏಳಿಗೆಯನ್ನು ಸಹಿಸಲಾರದೆ ಆತನ ವಿರೋಧಿಗಳು ಆತನನ್ನು ಕೊಲೆ ಮಾಡಿದ್ದಾರೆ ಎಂದು ಶಂಕಿಸುತ್ತಾರೆ.
ಮುಂದಿನ ಚಿತ್ರಕ್ಕೆ ಚಿತ್ರಕತೆ ಸಿದ್ಧಪಡಿಸಿದ್ದ..
 ಆತನ ಕೋಣೆಯಲ್ಲಿ ಆತ ತನ್ನ ಮುಂದಿನ ಚಿತ್ರ ರೋಸಾ ಲುಕ್ಸಂಬರ್ಗ್‌ಗಾಗಿ ಚಿತ್ರಕಥೆ ಸಿದ್ಧಪಡಿಸಿ, ಪ್ರಖ್ಯಾತ ನಟಿ ರೋಮಿಯನ್ನು ಮುಖ್ಯ ಪಾತ್ರದಲ್ಲಿ ಕಾಣಲು ಬಯಸಿದ್ದ.
ಜರ್ಮನ್‌ ಚಿತ್ರರಂಗದಲ್ಲಿ ಹೊಸ ತಲೆಮಾರಿನ ಚಿತ್ರಗಳನ್ನು ರೂಪಿಸಿ ಭವಿಷ್ಯದ ಭಾಷ್ಯ ಬರೆದ ಬೈಂಡರ್‌.ಅತಿ ಚಿಕಕ್ ವಯಸ್ಸಿಗೆ ಮರೆಯಾಗುತ್ತಾನೆ ಎಂದು ಯಾರು ಭಾವಿಸಿರಲಿಕ್ಕಿಲ್ಲ.ಆದರೆ ಆತನ ಚಿತ್ರಗಳು ಈಗಲೂ ನೆನಪಾಗುತ್ತವೆ...ನಮ್ಮನ್ನು ಕಾಡುತ್ತವೆ